ಪ್ರಯಾಣಿಕರ ಗಮನಕ್ಕೆ; ಕುಕ್ಕೇ ಸುಬ್ರಹ್ಮಣ್ಯ- ಯಶವಂತಪುರ ನಡುವಿನ ರೈಲು ಪ್ರಯಾಣಿಕರೇ ಗಮನಿಸಿ ಹೊಸ ವೇಳಾಪಟ್ಟಿ ಬಿಡುಗಡೆಯಾಗಿದೆ

0

ಬೆಂಗಳೂರು/ಹಾಸನ/ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯ , ಧರ್ಮಸ್ಥಳ ಹೋಗುವ ಭಕ್ತರಿಗೆ ಇದೇ ಜುಲೈ 17/2023 ರಿಂದ ಅನ್ವಯವಾಗುವಂತೆ ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ನೈಋತ್ಯ ರೈಲ್ವೇ ಈ ಕುರಿತು ಹೊಸ ಆದೇಶ ಹೊರಡಿಸಿದ್ದು ಪ್ರಯಾಣಿಕರು ಈ ಕೆಳಕಂಡ ಸಮಯ ನಿಗದಿ ಮಾಡಿಕೊಳ್ಳುವಂತೆ ಕೋರಿದ್ದಾರೆ . ,


ಗಮನಿಸಿ ಹೊಸ ವೇಳಾಪಟ್ಟಿ ಇಂತಿದೆ ; ನೈಋತ್ಯ ರೈಲ್ವೆಯ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿ : , ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 7 ಗಂಟೆಗೆ ಹೊರಡಲಿದ್ದು . ಸಂಜೆ 4.30ಕ್ಕೆ ಯಶವಂತಪುರವನ್ನು ತಲುಪಲಿದೆ. ಜುಲೈ 17ರಿಂದಲೇ ಜಾರಿಗೆ ಬರುವಂತೆ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ . , ರೈಲು ಬೆಳಗ್ಗೆ 7ಗಂಟೆ ಮಂಗಳೂರು ಜಂಕ್ಷನ್‌ನಿಂದ ಹೊರಟು

ಬಂಟ್ವಾಳ (7.33 ರಿಂದ 7.35), ಕಡಬ ಪುತ್ತೂರು (8.20 ರಿಂದ 8.22), ಸುಬ್ರಮಣ್ಯ ರೋಡ್ (9 ರಿಂದ 9.10)ಕ್ಕೆ ಆಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ . , ಸುಬ್ರಹ್ಮಣ್ಯ ರೋಡ್‌ನಿಂದ ಹೊರಡುವ ರೈಲು ಸಕಲೇಶಪುರ (11.30 ರಿಂದ 11.40),

ಹಾಸನ (12.40 ರಿಂದ 12.45), ಚನ್ನರಾಯಪಟ್ಟಣ (1.10 ರಿಂದ 1.11), ಶ್ರವಣಬೆಳಗೊಳ (1.22 ರಿಂದ 1.23), ಬಿ. ಜಿ. ನಗರ (1.47 ರಿಂದ 1.48) ತಲಪಲಿದೆ. , ಯಡಿಯೂರು (2.01 ರಿಂದ 2.02), ಕುಣಿಗಲ್ (2.18 ರಿಂದ 2.19), ನೆಲಮಂಗಲ (3 ರಿಂದ 3.01), ಚಿಕ್ಕಬಣಾವರ (3.44 ರಿಂದ 3.45)ಕ್ಕೆ ತಲುಪಲಿದೆ. ಯಶವಂತಪುರ ನಿಲ್ದಾಣಕ್ಕೆ 4.30ಕ್ಕೆ ಆಗಮಿಸಲಿದೆ. ರೈಲಿನ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಈ ರೈಲು ಸೇವೆಯ

ಉಪಯೋಗ ಬಳಸಿಕೊಳ್ಳುವಂತೆ ಈ ವಿಷಯ ತಿಳಿಯದ ಇತರರಿಗು ಶೇರ್ ಮಾಡಿ ಉಪಯುಕ್ತ ಮಾಹಿತಿ ತಲುಪಿಸುವಂತೆ ಕೋರಲಾಗಿದೆ .

LEAVE A REPLY

Please enter your comment!
Please enter your name here