ಗುಲಾಬಿ ದಳಗಳಿಂದ ತಯಾರಿಸುವ ” ಗುಲ್ಕಂದ್” ಪದಾರ್ಥದ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

0

ಗುಲಾಬಿ ಹೂವು ಯಾರಿಗೆ ಇಷ್ಟ ಇಲ್ಲ ಹೇಳಿ, ಅದರ ಪರಿಮಳ ,ಸೌಂದರ್ಯ ಎಲ್ಲವೂ ಚಂದ ಗುಲಾಬಿ ಹೂವಿಂದ ಹಲವಾರು ನೈಸರ್ಗಿಕ ಪದಾರ್ಥಗಳನ್ನು ತಯಾರಿಸುತ್ತಾರೆ ಆದರೆ ಈ ಪದಾರ್ಥ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಯಾವ ಪದಾರ್ಥ ಎಂದು ಯೋಚಿಸುತ್ತಿದ್ದೀರಾ? “ಗುಲ್ಕಂದ್”, ಸಾಮಾನ್ಯವಾಗಿ ಬೀಡಾ ಮತ್ತು ಪಾನ್ ತಯಾರಿಸುವಾಗ ಇದನ್ನು ಬೆಳಸುತ್ತಾರೆ. ಗುಲಾಬಿ ದಳಗಳಿಂದ ತಯಾರಿಸುವ ಈ ಪದಾರ್ಥದ ಉಪಯೋಗಗಳನ್ನು ತಿಳಿದಿದ್ದೀರಾ?

ಗುಲ್ಕಂದ್ ಪ್ರಯೋಜನಗಳು

• ಗುಲ್ಕಂದ್ ತಿನ್ನಿ ಶಕ್ತಿಶಾಲಿಯಾಗಿ:
 
                  ಗುಲ್ಕಂದ್ ನಲ್ಲಿರುವ ಅಮೈನೋ ಆಸಿಡ್ ದೇಹಕ್ಕೆ ಬಹಳ ಶಕ್ತಿ ನೀಡುತ್ತದೆ ಮತ್ತು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡವಂತೆ ನಮ್ಮ ದೇಹವನ್ನು ತಯಾರಿಸುತ್ತದೆ.

• ಜೀರ್ಣಕ್ರಿಯೆಗೆ ಉಪಯೋಗಕಾರಿ:

                  ಪಾನ್, ಬೀಡಾ ಅನೇಕ ಔಷಧಿಗಳಲ್ಲಿ ಗಲ್ಕಂದ್  ಪದಾರ್ಥವನ್ನು ಬಳಸುತ್ತಾರೆ ಇದಕ್ಕೆ ಮುಖ್ಯ ಕಾರಣ, ಇದು ಜೀರ್ಣಕ್ರಿಯೆಗೆ ಬಹಳ ಸಹಯಕಾರಿ. ಅಸಿಡಿಟಿ ಸಮಸ್ಯೆಗಳನ್ನು ಕೂಡ ಪಾರುಮಾಡುತ್ತದೆ. ಹಾಗಾಗಿ ಹೊಟ್ಟೆಯ ಸಮಸ್ಯೆಗಳಿಗೆ ಗುಲ್ಕಂದ್  ಸೇವಿಸುವುದು ಉತ್ತಮ.

• ಸೌಂದರ್ಯಕ್ಕೆ ಬಹಳ ಸಹಾಯಕಾರಿ:
                 ಗುಲ್ಕಂದ್ ಸೇವಿಸುವುದರಿಂದ ನಮ್ಮ ತ್ವಚೆಗೆ ಬಹಳ ಲಾಭಕಾರಿ ಇದು ತುರಿಕೆ, ನೆರಿಗೆ ಮೊಡವೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿ ದಿನ ಗುಲ್ಕಂದ್ ಸೇವನೆಯಿಂದ ನಮ್ಮ ಚರ್ಮದ ಆರೋಗ್ಯವನ್ನು ನಾವು ಕಾಪಾಡಬಹುದು.

• ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ:
               ಉಷ್ಣತೆ ಹೆಚ್ಚಾದಾಗ ನಮಗೆ ಹಲವಾರು ಸಮಸ್ಯೆಗಳು ಕಂಡುಬರುತ್ತದೆ ಕಣ್ಣಿನ ಕುಟ್ಟಿಗೆ, ಬಾಯಲ್ಲಿ ಬೊಬ್ಬೆಗಳು,ಮುಖದ ಮೇಲೆ ಮೊಡವೆಗಳು ಹೀಗೆ ಈ ಸಮಸ್ಯೆಗಳಿಂದ ನಾವು ತೊಂದರೆ ಅನುಭವಿಸುತ್ತೇವೆ. ಪ್ರತಿದಿನ ಗುಲ್ಕಂದ್ ಸೇವನೆಯಿಂದ ದೇಹದ ಉಷ್ಣತೆಯನ್ನು ನಾವು ನಿಯಂತ್ರಿಸಿಕೊಳ್ಳಬಹುದು.

ಪ್ರೀತಿಯ ಸಂಕೇತವಾದ ಈ ಗುಲಾಬಿ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಬಹಳ ಒಳ್ಳೆಯದು. ಗುಲ್ಕಂದ್ ಅನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ .ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.

ತನ್ವಿ. ಬಿ

LEAVE A REPLY

Please enter your comment!
Please enter your name here