ಅಕ್ಷರ ಅಕಾಡೆಮಿ, ಕೆಎಎಸ್/ ಐಎಎಸ್ ಹಾಗೂ ಅಕ್ಷರ ಬುಕ್ ಹೌಸ್ ಹಾಸನ ಅರ್ಪಿಸುವ ಅಕ್ಷರ ಸ್ಟಡಿ ಸರ್ಕಲ್

0

ಕೆ ಎ ಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಅಕ್ಷರ ಅಕಾಡೆಮಿ ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇಂದೂ ಸಹ ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉನ್ನತ ಮಟ್ಟದ ತರಬೇತಿ ನೀಡುತ್ತಿದೆ. ಅಕ್ಷರ ಅಕಾಡೆಮಿ ಪ್ರಾರಂಭವಾದಾಗಲೇ ಮಕ್ಕಳಿಗೆ ಓದಲು ಬೇಕಾಗಿರುವ ವ್ಯವಸ್ಥಿತ ಸ್ಟಡಿ ಸರ್ಕಲ್ ಅನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು ಅದು ಇಂದು ಅಂದರೆ ಆಗಸ್ಟ್ 15 2023 ಸ್ವಾತಂತ್ರ್ಯ ದಿನಾಚರಣೆ ಅಂದು ಉತ್ತಮ ರೀತಿಯಲ್ಲಿ ವಿನ್ಯಾಸಗೊಂಡು, ಓದಲು ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡು ಅಕ್ಷರ ಸ್ಟಡಿ ಸರ್ಕಲ್ ಎಂಬ ಹೆಸರಿಂದ ಪ್ರಾರಂಭವಾಗಲು ಸಿದ್ಧವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಇತರ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಅಕ್ಷರ ಸ್ಟಡಿ ಸರ್ಕಲ್ ಒಳಗೊಂಡಿರುವ ಸೌಲಭ್ಯಗಳು ಐವತ್ತು ವಿದ್ಯಾರ್ಥಿಗಳು ಮಾತ್ರ ಕುಳಿತು ಓದಬಹುದಾದ ವಿಶಾಲವಾಗಿ ವಿಭಾಗಗೊಂಡ ಕ್ಯಾಬಿನ್ ಗಳು.

ಉತ್ತಮ ರೀತಿಯ ಗಾಳಿ, ಬೆಳಕನ್ನು ಒಳಗೊಂಡ ನಿಶ್ಯಬ್ದ ವಾತಾವರಣ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಇಂಟರ್ನೆಟ್ ವ್ಯವಸ್ಥೆ ಹಾಗೂ ಪ್ರತಿನಿತ್ಯ ದಿನಪತ್ರಿಕೆ, ಮ್ಯಾಗಿನ್ ಗಳನ್ನು ಒದಗಿಸುವ ವ್ಯವಸ್ಥೆ. ದಿನದ 24 ಗಂಟೆ ಅಕ್ಷರ ಸ್ಟಡಿ ಸರ್ಕಲ್ ಈ ಎಲ್ಲಾ ಸೌಲಭ್ಯಗಳೊಂದಿಗೆ ತೆರೆದಿರುತ್ತವೆ. ಇದನ್ನು ಹೆಚ್ಚು ಪ್ರಚಾರ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಹಕರಿಸಬೇಕಾಗಿ ತಮ್ಮಲ್ಲಿ ಮನವಿ

LEAVE A REPLY

Please enter your comment!
Please enter your name here