ಅಲ್ಪ ಸಂಖ್ಯಾತರು ಶಿಕ್ಷಣಕ್ಕೆ ಆಧ್ಯತೆ ನೀಡಲಿ: ಸಚಿವ ಜಮೀರ್

0

ರಾಜ್ಯ ಸರ್ಕಾರದ ಯೋಜನೆಗಳನ್ನು ಅಲ್ಪ ಸಂಖ್ಯಾತ ಸಮುಧಾಯದವರು ಸದುಪಯೋಗ ಮಾಡಿಕೊಂಡು ಶಿಕ್ಷಣದ ಮುಂಚೂಣಿಗೆ ಬರಬೇಕು ಎಂದುವಸತಿ ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಝಡ್.ಜಮೀರ್ ಆಹಮ್ಮದ್ ಖಾನ್ ಹೇಳಿದರು. ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸುಮಾರ್ 1.60 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾದ್ಯಮ ಶಾಲೆ ನೂತನ‌ ಕಟ್ಟಡವನ್ನು ಉದ್ಘಾಟಿಸಿದ ಅವರು ಮಾತನಾಡಿ ಅರಸೀಕೆರೆ ಅಲ್ಪ ಸಂಖ್ಯಾತರ ಶಾಲೆ ನೂರಕ್ಕೆ ನೂರು ಫಲಿತಾಂಶ ಪಡೆದಿರುವುದು ಸ್ವಾಗತಾರ್ಹ.ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಜವಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇವೆ.3500 ಕೋಟಿ ರೂ ಸ್ಕಾಲರ್ ಶೀಪ್ 500 ಕೋಟಿಗೆ ಹಿಂದಿನ ಸರ್ಕಾರ ಇಳಿಸಿತ್ತು.ಆದರೆ ಸಿದ್ದರಾಮಯ್ಯ ಸರ್ಕಾರ ಹೆಚ್ಚುವರಿ ಸ್ಕಾಲರ್ ಶೀಪ್ ನೀಡಿದೆ.

ಈ ಸಮುಧಾಯದ ವಿದ್ಯಾರ್ಥಿಗಳು ಐಪಿಎಸ್, ಐಎಎಸ್ ಸೇರಿದಂತೆ ಯಾವುದೇ ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹಣದಿಂದ ಯಾರೂ ಏನು ಸಾಧಿಸಲು ಸಾದ್ಯವಿಲ್ಲ.ಶಿಕ್ಷಣದಿಂದ ಸಾಧಿಸಲು ಸಾದ್ಯ ಎಂಬುದನ್ನು ಮರೆಯಬಾರದು.ಸ್ವಯಂ ಉದ್ಯೋಗಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ.ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಪಕ್ಷದ ಬಗ್ಗೆ ಜಾಗೃತರಾಗಿರಿ.ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿಗಳ ಅನುಷ್ಠಾನವೇ ಇಂದು ರಾಜ್ಯ ಜನತೆಯ ವಿಶ್ವಾಸವನ್ನು ಗಳಿಸಲು ಸಾದ್ಯವಾಗಿದೆ ಎಂದರು. ಕಾರ್ಯಕ್ರಮ‌ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ ಅಂಗ್ಲಭಾಷೆ ವ್ಯವಹಾರಿಕವಾಗಿ ಅನಿವಾರ್ಯವಾಗಿದೆ.ನಿರ್ಮಿತಿ ಕೇಂದ್ರದವರು ಉತ್ತಮ‌ ಕಟ್ಟಡ ನಿರ್ಮಾಣ ಮಾಡಿದ್ದಾರೆ.ಅಲ್ಪ ಸಮುಧಾಯ ಶಿಕ್ಷಣದಲ್ಲಿ ಮುಂದೆ ಬರಬೇಕು.ಮುಂದಿನ ದಿನಗಳಲ್ಲಿ ಅಲ್ಪ ಸಂಖ್ಯಾತ ಸಮುಧಾಯಕ್ಕೆ ಜೂನಿಯರ್ ಕಾಲೇಜು ಕೂಡ ನೂತನವಾಗಿ ಬರಲಿದೆ.

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮುಸ್ಲಿಂ ಸಮುಧಾಯ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ಚರಂಡಿ, ಸಿಮೆಂಟ್ ರಸ್ತೆ, ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಮುಖಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ.ಸಚಿವ ಜಮೀರ್ ಅಹಮ್ಮದ್ ಕೂಡ ಮೂರು ಕೋಟಿ ರೂ ಅನುಧಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದಾಗ ಕೂಡಲೇ ಐದು ಕೋಟಿ ರೂ ಬಿಡುಗಡೆ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಭರವಸೆ ನೀಡಿದರು.ಮುಸ್ಲಿಂ ಸಮುಧಾಯಕ್ಕೂ ಗಂಗಾಕಲ್ಯಾಣ ಯೋಜನೆ ಜಾರಿಗೆ ತರಬೇಕು.ಈ ಸಮಯದಯ ಕೂಡ ಇಂದು ಬಹುತೇಕ ಜಮೀನುದಾರರು ಅಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಿ.ಗಿರೀಶ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಪಾಷಾ, ನಿರ್ದೇಶಕಿ ಸೈಯದಾ ಸಾನೀಯ, ಜಿಲಾನಿ ಮುಖರ್ಜಿ, ನಗರಸಭೆ ಸದಸ್ಯ ಶಮೀವುಲ್ಲಾ, ಜಿ.ಪಂ ಸಿಇಓ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಡಾ.ಜಗದೀಶ್, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ತಹಸೀಲ್ದಾರ್ ಸಂತೋಷ್ ಕುಮಾರ್, ಬಿಇಓ ಮೋಹನ್ ಕುಮಾರ್, ಉಪ ತಹಸೀಲ್ದಾರ್ ಪಾಲಾಕ್ಷ, ಮುಖಂಡರಾದ, ನಗರಸಭೆ ಸದಸ್ಯರಾದ ವೆಂಕಟಮುನಿ, ರಾಜಶೇಖರ್, ಜಿ.ಟಿ ಗಣೇಶ್, ಅನ್ನಪೂರ್ಣ,ಫಜ್ಲೂಲ್ ಜಮೀಲ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here