ಇನ್ನು ೧೦ ದಿನಗಳಲ್ಲಿ ಆಮ್ಲಜನಕ ಸ್ಥಾವರ ನಿರ್ಮಾಣ: ಶಾಸಕ ಪ್ರೀತಮ್ ಜೆ. ಗೌಡ

0

ಹಾಸನ: ಕೊರೋನಾ ಸೋಂಕು ದಿನೆ ದಿನೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನೇಚ್ಚರಿಕ ಕ್ರಮವಾಗಿ ಹಾಸನದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸಥಳ ಗುರುತಿಸಿ, ಆಮ್ಲಜನಕ ಸ್ಥಾವರವನ್ನು ಇನ್ನು ೧೦ ದಿನಗಳಲ್ಲಿ ನಿರ್ಮಾಣ ಮಾಡುವಂತೆ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ರವರು ಸೂಚಿಸಿದರು.

ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕು ಆವರಿಸುತ್ತಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಎರಡನೆ ಆಮ್ಲಜನಕ ಸ್ಥಾವರ ನಿರ್ಮಿಸಲು ಸ್ಥಳ ಗುರುತು ಮಾಡಲಾಗುತ್ತಿದೆ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಲು ಸಂಬಂಧ ಪಟ್ಟವರಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿಗಾವಹಿಸಲಾಗುವುದು ಎಂದರು. ನಂತರ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ಸ್ಥಿತಿ ಗತಿಯನ್ನು ಆಲಿಸಿದರು. ಏನಾದರೂ ಲಾಕ್ ಡೌನ್ ಆದೇಶ ಬಂದು ಸೋಮವಾರದಿಂದ ಜಾರಿ ಬಂದರೇ ಓಪಿಡಿ ರೋಗಿಗಳು ಕಡಿಮೆ ಆಗುತ್ತದೆ. ಎಮರ್ಜೆನ್ಸಿಯನ್ನು ಅಲ್ಲೆ ಮಾಡಿಕೊಳ್ಳಬಹುದು ಎಂದು ಶಾಸಕರು ಸಲಹೆ ನೀಡಿದರು.

ಇದೆ ವೇಳೆ ಹಿಮ್ಸ್ ನಿರ್ದೇಶಕರಾದ ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ತಾಲೂಕು ವೈದ್ಯಾಧಿಕಾರಿ ವಿಜಯ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here