ಹಾಸನ ಜಿಲ್ಲಾ ಪೊಲೀಸ್, ಅರಸೀಕೆರೆ ನಗರ ಪೊಲೀಸ್ ಠಾಣೆ ಮತ್ತು ತಾಲ್ಲೂಕು ಆಡಳಿತ, ಅರಸೀಕೆರೆ. ಶ್ರೀ ಗೌರಿ -ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ “ಸೌಹಾರ್ದ ಸಭೆ”. ಅರಸೀಕೆರೆ ನಗರದ ತಾಲೂಕ್ ಆಡಳಿತ ಕಚೇರಿ ಪಕ್ಕದಲ್ಲಿರುವ ಸಭಾಂಗಣದಲ್ಲಿ ಇಂದು ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆಯಿತು. ಈ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಸ್ಥಳೀಯ ಶಾಸಕ ಶಿವಲಿಂಗೇಗೌಡರು, ಅಡಿಷನಲ್ ಎಸ್.ಪಿ.ತಮ್ಮಯ್ಯ, ತಹಸಿಲ್ದಾರ್ ಸಂತೋಷ್ ಕುಮಾರ್, ಡಿವೈಎಸ್ಪಿ ಕಿಶೋರ್, ನಗರಸಭೆ ಅಧ್ಯಕ್ಷ ಗಿರೀಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ನಡೆಯುವ ಗೌರಿ ಮತ್ತು ಗಣೇಶ ಹಾಗೂ ಈದ್ ಮಿಲಾದ್ ಎರಡು ಹಬ್ಬಗಳಿಗೆ ಪೊಲೀಸ್ ಇಲಾಖೆ, ನಗರ ಸಭೆ, ಕೆಇಬಿ ಇಲಾಖೆ ವತಿಯಿಂದ ಕಡ್ಡಾಯವಾಗಿ ಪರವಾನೆ ಪಡೆದು ಹಬ್ಬ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ಸಬ್ ಇನ್ಸ್ಪೆಕ್ಟರ್ ಲತಾ ಎನ್.ಜೆ. ಹಲವು ಕಮಿಟಿಗಳ ಮುಖಂಡರುಗಳು ಸಂಘಟನೆಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿದ್ದರು