“ಎತ್ತಿನಹೊಳೆ ಯೋಜನೆ ವಿರುದ್ದ ಸಿಡಿದೆದ್ದ ರೈತರು-ಕಾಮಗಾರಿಗೆ ತಡೆ”

0

ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಗಂಗೂರು ಗ್ರಾಮಸ್ಥರು ಎತ್ತಿನಹೊಳೆ ಯೋಜನೆಯಿಂದ ನಮಗೆ ಅನ್ಯಾಯವಾಗಿದೆ, ಕಾಮಗಾರಿ ನಡೆಯುವ ಜಾಗದಲ್ಲಿ ಪ್ರತಿಭಟನೆ, ಆಕ್ರೋಶವನ್ನು. “ಎತ್ತಿನಹೊಳೆ ಯೋಜನೆ ವಿರುದ್ದ ಸಿಡಿದೆದ್ದ ರೈತರು-ಕಾಮಗಾರಿಗೆ ತಡೆ”

ಗಂಗೂರು ಗ್ರಾಮಸ್ಥರಿಂದ ಸತತ ೧೬ ನೇ ಪ್ರತಿಭಟನೆ. ಅರಣ್ಯ ಇಲಾಖೆ ವಿರುದ್ದ ರೈತರಿಂದ ಆಕ್ರೋಶ ರಕ್ತ ಕೊಟ್ಟೆವೂ -ಭೂ ಪರಿಹಾರ ಬಿಡಲ್ಲ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಒತ್ತಾಯ.

ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಗಂಗೂರು ಗ್ರಾಮದ ಬಳಿ ಹಾದು ಹೋಗುತ್ತಿರುವ ಸರ್ಕಾರದ ಮಹತ್ವಪೂರ್ಣ ಎತ್ತಿನಹೊಳೆ ಯೋಜನೆಯಿಂದ ನಮಗೆ ತೀವ್ರ ಅನ್ಯಾಯವಾಗಿದೆ.ರೈತರಿಂದ ಉಪಾಯದಿಂದ ಭೂಮಿ ವಶ ಪಡಿಸಿಕೊಂಡು ಪರಿಹಾರ ನೀಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸೇರಿ ನಿಮಗೆ ಪರಿಹಾರ ನೀಡಲು ಮೀನಾ-ಮೇಷ ಎಣಿಸುತ್ತಾರೆ.ಈ ಬಗ್ಗೆ ಸಂಬಂಧ ಪಟ್ಟವರಿಗೆ ಲಿಖಿತ, ಮೌಖಿಕವಾಗಿ ದೂರು ನೀಡಿದರೂ ಯಾವ ಪ್ರಯೋಜ ಕಂಡಿಲ್ಲ, ಈಗಾಗಲೇ ೧೬ ದಿನದಲ್ಲಿ ಕಾಮಗಾರಿ ಸ್ಥಗಿತ ಮಾಡಿಸಿ ಪ್ರತಿಭಟನೆ ನಡೆಸಲಾಗುತ್ತದೆ.ಮುಂದೆ ಹೋರಾಟ ಉಗ್ರ ಸ್ವರೂಪ ಪಡೆಯುವ ಹಿನ್ನಲೆಯಲ್ಲಿ ಅನಾಹುತ ನಡೆದರೆ ಸರ್ಕಾರವೇ ನೇರ ಹೊಣೆಗಾರಿಕೆ ಎಂದು ಭೂಮಿ ಕಳೆದುಕೊಂಡ ಸಂತ್ರಸ್ತರು ಜೆಸಿಬಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗಂಗೂರು ಗ್ರಾಮದ ಮುಖಂಡ ಸಿದ್ದೇಶ, ಸರ್ಕಾರದಿಂದ ನಡೆಯುತ್ತಿರುವ ಎತ್ತಿನಹೊಳೆ ಯೋಜನಾ ಕಾಮಗಾರಿ ಗಂಗೂರು,ಮಲಯಪ್ಪಕೊಪ್ಪಲು, ಸಾಣೇನಹಳ್ಳಿ ಹಾಗೂ ಚಟ್ನಹಳ್ಳಿ ಗ್ರಾಮದ ಮೂಲಕ ಹಾದು ಹೋಗಿದೆ. ಒಟ್ಟು ನಾಲ್ಕು ಗ್ರಾಮದಿಂದ ೭೪ ಕೃಷಿಕರ ೧೨೦ ಎಕ್ಕರೆ ಭೂಮಿ ಕಾಮಗಾರಿಗೆ ಒಳಪಟ್ಟಿದೆ. ೨೦೧೭ ರಲ್ಲಿ ಎತ್ತಿನಹೊಳೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ಭೂ ಸ್ವಾದೀನ ನಡೆಸಿ ಪರಿಹಾರ ನೀಡಲಾಗುತ್ತದೆ ಎಂದು ಅಂದಿನ ಬೆಳೆಗೆ ಪರಿಹಾರ ನೀಡಿ ಉಪಾಯದಿಂದ ಭೂಮಿ ವಶ ಪಡಿಸಿಕೊಂಡ ಬಳಿಕ ಈ ಭೂಮಿ ಐದಳ್ಳ ಅರಣ್ಯ ಇಲಾಖೆಗೆ ಒಳಪಡುತ್ತದೆ ಯಾವ ಕಾರಣಕ್ಕೂ ಪರಿಹಾರ ನೀಡಲು ಬರುವುದಿಲ್ಲ ಎಂದು ಕಡ್ಡಿ ಮುರಿದ ರೀತಿಯಲ್ಲಿ ತಿಳಿಸಿದ ಕಾರಣದಿಂದ ಸುಮಾರು ೭೪ ಕುಟುಂಬಗಳು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕಳೆದ ೧೬ ದಿನದಿಂದ ಎತ್ತಿನಹೊಳೆ ಕಾಮಗಾರಿ ನಡೆಸುವ ಸ್ಥಳದಲ್ಲಿ ಕಾಮಗಾರಿ ಸ್ಥಗಿತ ಮಾಡಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಸದ್ಯ ಉಳುಮೆ ನಡೆಸುತ್ತಿರುವ ಭೂಮಿ ಸಂಬಂಧ ನಮಲ್ಲಿ ಪಹಣಿ ಸೇರಿದಂತೆ ಪಕ್ಕ ದಾಖಾಲತಿ ಮತ್ತು ಬ್ಯಾಂಕಿನಲ್ಲಿ ಸಾಲ ಪಡೆಯಲಾಗಿದೆ. ಸುಮಾರು ೪೫ ವರ್ಷದ ತೆಂಗಿನಮರಗಳೇ ಸಾಕ್ಷಿಯಾಗಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಈ ಭೂಮಿ ನಮ್ಮದು ಎನ್ನುವಲ್ಲಿ ಯಾವುದೇ ಹುರುಳಿಲ್ಲ, ೧೨೦ ಎಕ್ಕರೆ ಭೂಮಿ ಕಳೆದುಕೊಂಡ ೭೪ ಕುಟುಂಬಗಳು ಎತ್ತಿನಹೊಳೆ ಯೋಜನೆಯಿಂದ ಬೀದಿಗೆ ಬಂದಿದ್ದಾರೆ. ಈಗಾಗಲೇ ಪ್ರತಿಭಟನಾ ಸ್ಥಳಕ್ಕೆ ಬೇಲೂರು ಶಾಸಕರು, ತಹಸೀಲ್ದಾರ್ ಮತ್ತು ಅಧಿಕಾರಿಗಳು ಆಗಮಿಸಿದ್ದಾರೆ ಹೊರತು ನಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲ, ನಮ್ಮ ಹೋರಾಟ ೧೬ ನೇ ದಿನಕ್ಕೆ ಬಂದಿದೆ. ಪ್ರತಿನಿತ್ಯ ರೈತರು ಮನೆಯಲ್ಲಿನ ಕೆಲಸ ಕಾರ್ಯಗಳನ್ನು ಬಿಟ್ಟು ಸ್ಥಳದಲ್ಲಿದ್ದು ಹೋರಾಟ ನಡೆಸಬೇಕಾಗಿದ ಹೀನ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ನಮಗೆ ಸೂಕ್ತ ಪರಿಹಾರ ನೀಡುವ ತನಕ ಯಾವ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವ ಪ್ರಶ್ನೇ ಇಲ್ಲ, ಬೇಕಿದ್ದರೆ ನಮ್ಮ ಪ್ರಾಣ ಹೋಗಲು ಕಷ್ಟ-ಪಟ್ಟು ಉಳುಮೆ ಮಾಡಿದ ಭೂಮಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಿವೇಗೌಡ, ವೀರಭದ್ರೇಗೌಡ, ಬಸವರಾಜು, ಪುಟ್ಟಮ್ಮ, ನೀಲಮ್ಮ ಸೇರಿದಂತೆ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here