ಮಸಾಲೆ ಪದಾರ್ಥಗಳಲ್ಲಿ ಹೆಸರು ಮಾಡಿದ ಕರಿಮೆಣಸು ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯಕಾರಿ?

8

ನಮ್ಮ ಭಾರತೀಯ ತಿಂಡಿ ಪದಾರ್ಥಗಳು ಬಹಳ ಹೆಸರನ್ನು ಸಂಪಾದಿಸಿದೆ. ಮಸಾಲಾ ಪದಾರ್ಥಗಳಿಗೆ ನಮ್ಮ ಭಾರತೀಯ ಅಡುಗೆಯಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಮಸಾಲಾ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಪದಾರ್ಥವೆಂದರೆ ಅದು ಕರಿಮೆಣಸು. ಇದು ಬರೀ ರುಚಿಯಲ್ಲ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಕರಿಮೆಣಸಿನಲ್ಲಿ ವಿಟಮಿನ್ ಎ, ಸಿ, ಪಿ ,ಕೆ ,ಕಬ್ಬಿಣಾಂಶ, ಕ್ಯಾಲ್ಸಿಯಂ ,ಫಾಸ್ಪರಸ್ ಮತ್ತು ಅಮೈನೋ ಆ್ಯಸಿಡ್ ಗಳಿವೆ ಹಾಗಾಗಿ ಇದು ಹಲವಾರು ರೋಗಗಳನ್ನು ತಡೆಯುತ್ತದೆ.

ಪ್ರಯೋಜನಗಳು:

• ತೂಕ ಇಳಿಸಲು ಸಹಾಯಕಾರಿ:
ಕರಿಮೆಣಸಿನಲ್ಲಿ ಫೈಟೋನ್ಯೂಟ್ರಿಯಂಟ್ಸ್ ಅಂಶ ಪ್ರಬಲವಾಗಿದೆ ಆದ್ದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ ಹಾಗೂ ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.

• ಶೀತ ಮತ್ತು ಕೆಮ್ಮಿಗೆ ಇದು ಮನೆಮದ್ದು:
ಕರಿಮೆಣಸು ಕೆಮ್ಮು ಮತ್ತು ನೆಗಡಿ ಗೆ ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ.ಇದರ ಖಾರ ಮತ್ತು ಬಿಸಿ ಗುಣಗಳು ಕೆಮ್ಮು ಮತ್ತು ನೆಗಡಿಯನ್ನು ತಡೆಯುತ್ತದೆ.

• ಜೀರ್ಣಕ್ರಿಯೆ ಸಮಸ್ಯೆಗೆ ಉಪಯೋಗಕಾರಿ:
ಸರಿಯಾಗಿ ಜೀರ್ಣ ಆಗೋದ್ ಆಗದಿದ್ದಾಗ ವಾಯು ಅಜೀರ್ಣ ಭೇದಿ ಮಲಬದ್ಧತೆ ಮತ್ತು ಆಮ್ಲೀಯತೆ ಆಗುವ ಸಂದರ್ಭಗಳು ಬರುತ್ತವೆ. ಕರಿಮೆಣಸಿನಲ್ಲಿರುವ ಪೈಪರೈನ್ ಅಂಶ ಜೀರ್ಣ ಕ್ರಿಯೆಯನ್ನು ಹೆಚ್ಚಿಸಲು ಉಪಯೋಗಗೊಳ್ಳುತ್ತದೆ.

• ಕ್ಯಾನ್ಸರ್ ರೋಗವನ್ನು ತಡೆಯುತ್ತದೆ:
ಕರಿಮೆಣಸಿನ ಜೊತೆಗೆ ಅರಿಶಿಣ ಸೇರಿಸಿ ಬಳಸಿದರೆ ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಸಹಾಯಕವಾಗುತ್ತದೆ. ಇದರ ಪೈಪರೈನ್ ಅಂಶ ಕ್ಯಾನ್ಸರ್ ಸೆಲ್ಸ್ ಗಳ ಬೆಳವಣಿಗೆಯನ್ನು ತಡೆಯುತ್ತದೆ.


ಕರಿಮೆಣಸು ಆಹಾರಕ್ಕೆ ಮಾತ್ರ ಫ್ಲೇವರ್ ಹೆಚ್ಚು ಮಾಡುವುದಿಲ್ಲ ನಿಮ್ಮ ಆರೋಗ್ಯದ ಫ್ಲೇವರನ್ನು ಕೂಡ ಹೆಚ್ಚಿಸುತ್ತದೆ.

– ತನ್ವಿ. ಬಿ .

8 COMMENTS

LEAVE A REPLY

Please enter your comment!
Please enter your name here