ಹಾಸನ : ಒಟ್ಟು 13 ಆರೋಪಿಗಳ ಅರೆಸ್ಟ್ ; ಎಸ್ಪಿ ಹರಿರಾಂ ಶಂಕರ್ ಸ್ಪಷ್ಟನೆ
ಹಾಸನದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷವನ್ನಿಟ್ಟುಕೊಂಡು ಕೃಷ್ಣೇಗೌಡ ಎಂಬುವರನ್ನು ನಡು ರಸ್ತೆ ಬಳಿ ಹತ್ಯೆ ಮಾಡಿದ್ದ ಸಂಬಂಧ ಮೊದಲು 6 ಜನರನ್ನು ಬಂಧಿಸಿದ್ದು, ಇನ್ನಷ್ಟು ತನಿಖೆ ಚುರುಕು ಮಾಡಿ ಈಗ ಮತ್ತೆ 7 ಜನ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಮೂವರನ್ನು ಶೀಘ್ರವೇ ಬಂಧಿಸುವುದಾಗಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಆಗಸ್ಟ್ 9 ರಂದು ಮದ್ಯಾಹ್ನ ನಡೆದ ಹಾಸನ ನಗರದ ಕುವೆಂಪುನಗರ 2ನೇ ಹಂತ, ಆಕ್ಸ್ಫರ್ಡ್ ಶಾಲೆಯ ಹತ್ತಿರದ ವಾಸಿ ಕೃಷ್ಣಗೌಡರವರು ಹಾಸನದ ಹೊರವಲಯ ಕೆಐಎಡಿಬಿ ಏರಿಯಾದಲ್ಲಿ ಎಸ್‌ಆರ್‌ಎಂ ಗಾನೈಟ್ ಫ್ಯಾಕ್ಟರಿ ನಡೆಸುತ್ತಿದ್ದು, ಈಗ ಫ್ಯಾಕ್ಟರಿಯನ್ನು ಮುಚ್ಚಿರುತ್ತಾರೆ.
ಕೃಷ್ಣಗೌಡರಿಗೆ ಕೆಲವು ಜನ ವ್ಯಕ್ತಿಗಳು ಹಣದ ವಿಚಾರದಲ್ಲಿ ಮೋಸ ಮಾಡಿದ್ದು, ಪ್ರತಿದಿನ ಫ್ಯಾಕ್ಟರಿ ಹತ್ತಿರ ಹೋಗಿ ಬರುತ್ತಿದ್ದು, ಕೃಷ್ಣಗೌಡ, ರವರು ಎ.ಸಿ. ಕಛೇರಿಯಲ್ಲಿ ಕೆಲಸವಿರುದಾಗಿ ಅಣ್ಣ ನಾಗೇಗೌಡ, ರವರಿಗೆ ಫೋನ್ ಮಾಡಿ ತಿಳಿಸಿದ್ದು, ತಮ್ಮ ಇನ್ನೋವಾ ಕಾರಿನಲ್ಲಿ ಫ್ಯಾಕರಿ ಪಕ್ಕದ ಫ್ಯಾಕ್ಟರಿ ಮಾಲೀಕರಾದ ಜಯಂತ್ ರವರನ್ನು ಮಾತನಾಡಿಸಿಕೊಂಡು ಅವರ ಫ್ಯಾಕ್ಟರಿ ಹತ್ತಿರ ಕಾರಿನಲ್ಲಿ ಹೊರಟು ಹೋದ. ಸ್ವಲ್ಪ ಸಮಯದ ನಂತರ ಕೂಗಾಡಿದ ಶಬ್ಧ ಕೇಳಿಸಿದೆ. ಜಯಂತ್ ಹೊರಗೆ ಬಂದು ನೋಡಿದಾಗ ಕೃಷ್ಣಗೌಡ, ರವರು ಅವರ ಫ್ಯಾಕ್ಟರಿ ಮುಂಭಾಗ ಕಾರಿನ ಹಿಂಬಾಗ ಕೆಳಕ್ಕೆ ಬಿದಿದ್ದು, ಯಾರೋ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕೊಚ್ಚಿ ಹಾಗೂ ಚುಚ್ಚಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಮೃತನ ತಮ್ಮ ನಾಗೇಗೌಡ, ರವರು ಕೊಟ್ಟ ದೂರಿನ ಮೇರಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಪೊಲೀಸ್ ಉಪ ಮಹಾನಿರೀಕ್ಷಕರು ದಕ್ಷಿಣ, ವಲಯ, ಮೈಸೂರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್, ರವರು ಭೇಟಿ ನೀಡಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ, ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ದಸ್ತಗಿರಿಯಾದ ಆರೋಪಿಗಳ ಹೆಸರು ಚನ್ನರಾಯಪಟ್ಟಣದ ತಾಲೂಕಿನ ಕೊರದಹಳ್ಳಿ ಗ್ರಾಮದ ಕಾರು ಚಾಲಕ ವೆಂಕಟೇಶ್ ಸಂಜೀವ್ 23 ವರ್ಷ, ಬೊಮ್ಮನಾಯಕಹಳ್ಳಿ ರಸ್ತೆಯ ನಿವಾಸಿ ಸುರೇಶ್ 44 ವರ್ಷ, ಚನ್ನರಾಯಪಟ್ಟಣ ನಗರ ನಿವಾಸಿ ಟೈಲರ್ ಕೆಲಸ ಮಾಡುವ ಎಂ. ಕೃಷ್ಣಕುಮಾರ್ 55 ವರ್ಷ, ಹಾಸನದ ಬಿ.ಎಂ. ರಸ್ತೆ ನಿವಾಸಿ ಸಂಪಾದಕಿ ಪಿ.ಕೆ. ಸುಧರಾಣಿ 28 ವರ್ಷ, ಚನ್ನರಾಯಪಟ್ಟಣ ತಾಲೂಕು ಮುಡುವನಹಳ್ಳಿ ಗ್ರಾಮದ ಐ.ವಿ. ಚೈತ್ರಾ, ಹಾಸನದ ಉದಯಗಿರಿ ಬಡಾವಣೆಯ ನಿವಾಸಿ ಅಶ್ವಿನಿ 36 ವರ್ಷ ಇವರು ಮೊದಲು ಪೊಲೀಸ್ ಬಲೆಗೆ ಸಿಕ್ಕಿ ಬಿದ್ದವರು.
ಉಳಿದ 6 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಪತ್ತೆಯಾಗಿರುವ ಆರೋಪಿಗಳ ವಿವರ: ಹಾಸನ ಬೇಲೂರು ರಸ್ತೆ ಗುಡ್ಡೇನಹಳ್ಳಿ ನಿವಾಸಿ ಆಟೋ ಚಾಲಕ ಚಂದನ 20 ವರ್ಷ, ಚನ್ನರಾಪಟ್ಟಣ ಗೊರನಹಳ್ಳಿ ನಿವಾಸಿ ಸೆಂಟ್ರಿಂಗ್ ಕೆಲಸ ಮಾಡುವ ಚೇತನ್ 22 ವರ್ಷ, ಮತ್ತೋರ್ವ ಚನ್ನರಾಯಪಟ್ಟಣದ ಬಾಗೂರು ಗ್ರಾಮದ ನಿವಾಸಿ ಎಂ. ಪ್ರದೀಪ್ 27 ವರ್ಷ, ಚನ್ನರಾಯಪಟ್ಟಣದ ಕೆನಾರ ಬ್ಯಾಂಕ್ ಹಿಂಭಾಗ, ಬಾಗೂರು ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು ಹಾಲಿ ವಾಸ 3 ನೇ ರಸ್ತೆ, ಲಾಯರ್ ಮುನಿಯಪ್ಪ ರವರ ಮನೆಯ ಹತ್ತಿರ, ಸಂಜಯನಗರ, ನಾಗಶೆಟ್ಟಿಹಳ್ಳಿ, ಬೆಂಗಳೂರು ಮೇಲ್ಕಂಡ ಆರೋಪಿಗಳನ್ನು ದಿನಾಂಕ : 23/08/2023 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ತನಿಖೆಯ ಸಂಬಂಧ ಪೊಲೀಸ್ ವಶಕ್ಕೆ ಪಡೆದುಕೊಂಡಿರುತ್ತೆ.
ಅರಳಿಮರದ ಸರ್ಕಲ್ ಹತ್ತಿರ ಬಾಗೂರು ಗ್ರಾಮದ ಬಿ.ಎಲ್. ಮಣಿಕಂಠ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ಯಾಡರಹಳ್ಳಿ ಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಧುಸೂದನ್ 21 ವರ್ಷ, ಮೈಸೂರು ಜಿಲ್ಲೆಯ ಇಲವಾಲ ಹೋಬಳಿ ಬೊಮ್ಮೇನಹಳ್ಳಿ ಗ್ರಾಮದ ನಿವಾಸಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಧನಂಜಯ್ 21 ವರ್ಷ, ಇದೆ ಗ್ರಾಮದ ಮತ್ತೋರ್ವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಿವಪ್ರಸಾದ್ 20 ವರ್ಷ ಈ ಆರೋಪಿಗಳನ್ನು 2023 ಆಗಸ್ಟ್ 24 ರಂದು ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ತನಿಖೆಯ ಸಂಬಂಧ ಪೊಲೀಸ್ ವಶಕ್ಕೆ ಪಡೆದುಕೊಂಡಿರುವುದಾಗಿ ಮಾಹಿತಿ ನೀಡದಿರು. ಇನ್ನು ಮುಖ್ಯವಾದ ಮೂರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಶೀಘ್ರದಲ್ಲಿಯೇ ಅವರನ್ನು ಕೂಡ ಬಂಧಿಸುವುದಾಗಿ ವಿಶ್ವಾಸವ್ಯಕ್ತಪಡಿಸಿದರು. ಇದೆ ವೇಳೆ ಡಿವೈಎಸ್ಪಿ ಮುರುಳಿಧರ್ ಇತರರು ಉಪಸ್ಥಿತರಿದ್ದರು.