ರಂಜಿತ್ (25) ಮೃತ ದುರ್ದೈವಿ. ಮುಂಜಾನೆ ಸಮಯದಲ್ಲಿ ರಂಜಿತ್ ಚಾಲಿಸುತ್ತಿದ್ದ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ. ಕೊಣನೂರು ಸುದ್ದಿಲೋಕ : ಶಿರಂಗಾಲದ ಯುವಕನೋರ್ವ ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಕೊಣನೂರು ಪಟ್ಟಣದ ರಸ್ತೆಯ ಅವೈಜ್ಞಾನಿಕ ಡಿವೈಡರ್ ಅದಕ್ಕೆ ಪ್ರಮುಖ ಕಾರಣ. ದಯವಿಟ್ಟು ಸೂಚನಫಲಕಗಳನ್ನು ಶೀಘ್ರವಾಗಿ ಅಳವಡಿಸಿ ಮುಂದೆ ಇಂತಹ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸುವಂತೆ ಯುವ ಮುಖಂಡ ದಿವಾಕರ ಗೌಡ ಮತ್ತು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದರು.
ರಂಜಿತ್ (25) ಮೃತ ದುರ್ದೈವಿ. ಮುಂಜಾನೆ ಸಮಯದಲ್ಲಿ ರಂಜಿತ್ ಚಾಲಿಸುತ್ತಿದ್ದ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ. ಕೊಣನೂರು ಪಟ್ಟಣಕ್ಕೆ ಕುಶಾಲನಗರ ಮಾರ್ಗವಾಗಿ ಬರುವಂತಹವರು ಎಚ್ಚರಿಕೆವಹಿಸಿ, ಕೊಣನೂರು ಪಟ್ಟಣದ ಅವೈಜ್ಞಾನಿಕ ಡಿವೈಡರ್ ಪರಿಣಾಮವಾಗಿ ಕಾರ್ ಡಿಕ್ಕಿ ಹೊಡೆದು ಕಾರ್ ಚಾಲನೆ ಮಾಡುತ್ತಿದ್ದ ಯುವಕ ಸ್ಥಳದಲ್ಲೇ ಸಾವನಪ್ಪಿದ್ದಾನೆ.