ಚಳಿಗಾಲದಲ್ಲಿ ನಮ್ಮ ಚರ್ಮವನ್ನು ಹೇಗೆ ಕಾಪಾಡಿಕೊಳ್ಳುವುದು?

0

ಚಳಿಗಾಲ ಪ್ರಾರಂಭವಾಗಿದೆ, ದಿನ ಕಳೆಯುತ್ತಿದ್ದಂತೆ ಚಳಿಗಾಲದಲ್ಲಿ ನಮ್ಮ ತ್ವಚೆಗೆ ಬಹಳ ಸಮಸ್ಯೆಗಳು ಉಂಟಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ನಮಗೆ ಹಲವಾರು ರೀತಿಯ ವಿಧಾನಗಳಿವೆ ಆದರೆ ತುಂಬಾ ಸುಲಭವಾದ ವಿಧಾನವೆಂದರೆ ರೋಜ್ ವಾಟರ್ ಬಳಸುವುದು.

ಚರ್ಮದ ಸಮಸ್ಯೆಗಳಿಂದ ಪಾರಾಗಲು ರೋಜ್ ವಾಟರ್ ಹೇಗೆ ಉಪಯೋಗಕಾರಿ:

• ರೋಜ್ ವಾಟರ್ ಎಲ್ಲಾ ಚರ್ಮ ಪ್ರಕಾರಗಳಿಗೂ ಸೂಕ್ತ:
ಒಬ್ಬೊಬ್ಬರಿಗೆ ಒಣಚರ್ಮ ಹಾಗೂ ಕೆಲವರಿಗೆ ಹೆಚ್ಚು ಎಣ್ಣೆ ಸ್ವರಿಸುವಿಕೆ ಚರ್ಮವಿರುತ್ತದೆ. ರೋಸ್ ವಾಟರ್ ಎರಡು ಚರ್ಮ ಪ್ರಕಾರಗಳಿಗೂ ಸೂಕ್ತ. ಹಾಗಾಗಿ ನೀವು ದಿನ ರೋಸ್ ವಾಟರ್ ನಿಮ್ಮ ಮುಖಕ್ಕೆ ಬಳಸಿನೋಡಿ ನೀವು ಹಲವಾರು ಬದಲಾವಣೆಗಳನ್ನು ಕಾಣಬಹುದು.

• ರೋಸ್ ವಾಟರ್ ಒಂದು ಅದ್ಭುತವಾದ ಮಾಯಿಸ್ಚರೈಸರ್:
ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳಿಂದ ಪಾರಾಗಲು ನಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡುವುದು ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಕ್ರೀಮುಗಳಿಗಿಂತ ರೋಜ್ ವಾಟರ್ ಬೆಲೆ ಬಹಳ ಕಡಿಮೆ. ಇದು ನಮ್ಮ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಹಾಗಾಗಿ ರಾತ್ರಿ ಸಮಯದಲ್ಲಿ ರೋಸ್ ವಾಟರ್ ಬಳಕೆಯಿಂದ ನಮ್ಮ ಚರ್ಮ ಮಾಯಿಶ್ಚರೈಸ್ ಆಗುವುದರಿಂದ ,ನಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ.

• ರೋಜ್ ವಾಟರ್ ಒಂದು ಆಂಟಿ ಬ್ಯಾಕ್ಟೀರಿಯಲ್ ಔಷಧಿ:
ಹಲವರಿಗೆ ಕೆಂಪುಬಣ್ಣದ ಗುಳ್ಳೆಗಳು, ಮೊಡವೆ ಸಮಸ್ಯೆ ಹೆಚ್ಚು. ಹಲವಾರು ರೀತಿಯ ದುಬಾರಿ ಕ್ರೀಮ್ ಗಳು ಬಳಸಿದರು ಈ ಸಮಸ್ಯೆಯಿಂದ ನಿಮಗೆ ವಿಧಾಯ ಸಿಗದಿರಬಹುದು. ಹಾಗಾಗಿ ಪ್ರತಿದಿನ ರೋಸ್ ವಾಟರ್ ಬಡಿಸಿದರೆ ನಿಮ್ಮ ಚರ್ಮ ಬಹಳ ಸುಂದರವಾಗುತ್ತದೆ.

ಸದಾ ಸುಂದರವಾಗಿರಲು ರೋಸ್ ವಾಟರ್ ಬಳಕೆಯನ್ನು ಪ್ರಾರಂಭಿಸಿ ಹಾಗೂ ನಿಮ್ಮ ಚರ್ಮದ ಸಮಸ್ಯೆಗಳನ್ನು ದೂರಮಾಡಿಕೊಳ್ಳಿ.

– ತನ್ವಿ. ಬಿ

LEAVE A REPLY

Please enter your comment!
Please enter your name here