ಚಳಿಗಾಲವೆಂದು ಭಯಪಡಬೇಡಿ ,ಆರೋಗ್ಯದ ಕಡೆ ಗಮನ ನೀಡಿ.

0

ಚಳಿಗಾಲ ಪ್ರಾರಂಭವಾಗಿದೆ. ಚಳಿಗಾಲ ಬಹಳ ಶಾಂತವಾಗಿದ್ದರು ಹಲವರು ಈ ಕಾಲದಲ್ಲಿ ತೊಂದರೆ ಅನುಭವಿಸುತ್ತಾರೆ. ಮಕ್ಕಳ ಚರ್ಮ ಹಾಗೂ ವಯಸ್ಸಾದವರ ಚರ್ಮ ಬಹಳ ಸೂಕ್ಷ್ಮ ಚಳಿಗಾಲದಲ್ಲಿ ಚರ್ಮದ ಸಮಸ್ಯೆ, ಒಣ ತ್ವಚೆ ಅನುಭವಿಸುತ್ತಾರೆ.

ಈ ಸಮಸ್ಯೆಯನ್ನು ತಡೆಗಟ್ಟಲು ಬಹಳ ಸುಲಭವಾದ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕು ಕ್ರಮಗಳನ್ನು ತೆಗೆದುಕೊಂಡು ನಾವು ಚಳಿಗಾಲದಲ್ಲಿ ಸುರಕ್ಷಿತವಾಗಿರಬಹುದು.

೧.ಒಣ ತ್ವಚೆ ಮತ್ತು ತುರಿಕೆ:
ಒಣ ತ್ವಚೆ ಇಂದ ತುರುಕೆ ಬರುವುದು ಸಹಜ. ನಮ್ಮ ತ್ವಚೆಯಲ್ಲಿರುವ ಮಾಯಿಸ್ಚರೈಸರ್ ಕಡಿಮೆಯಾದಾಗ ಒಣ ತ್ವಚೆ ಸಮಸ್ಯೆಗಳು ಬರುತ್ತದೆ. ಇದನ್ನು ತಡೆಗಟ್ಟಲು ನಾವು ಸಣ್ಣ ಕ್ರಮಗಳನ್ನು ತೆಗೆದುಕೊಳ್ಳೋಣ ;

• ಮುಖಕ್ಕೆ ಮಾಯಿಶ್ಚರೈಸರ್ ಬಳಸುವುದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮಾಯಿಶ್ಚರೈಸರ್ ಲಭ್ಯವಾಗುತ್ತದೆ ನಿಮ್ಮ ಚರ್ಮಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಅನ್ನು ಆರಿಸಿಕೊಂಡು ನಿಮ್ಮ ಒಣ ಚರ್ಮದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು.
• ಹಾಗೂ ನಿಮ್ಮ ದೇಹಕ್ಕೆ ಲೋಶನ್ ಬದಲು ಗಟ್ಟಿಯಾಗಿರುವ ಕ್ರೀಮ್ಗಳನ್ನು ಪ್ರತಿದಿನ ಹಚ್ಚಿ.
• ತುರಿಕೆ ಸಮಸ್ಯೆಗಳು ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ ನಿಮಗೆ ಸೂಕ್ತವಾದ ಮದ್ದನ್ನು ಹಚ್ಚಿಕೊಳ್ಳಿ.

೨. ಶೀತದ ಸಮಸ್ಯೆ:
ಈ ವರ್ಷ ಚಳಿಗಾಲ ಮಾತ್ರವಲ್ಲ ಅದರೊಂದಿಗೆ ಕೋವಿಡ್ ಸಮಸ್ಯೆ ಕೂಡ ಇದೆ.ಹಾಗಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ನೀಡಬೇಕು. ಹಾಗಾದರೆ ಶೀತದ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ?

• ಸದಾ ಬಿಸಿ ನೀರು ಕುಡಿಯಿರಿ
• ಬೆಚ್ಚಗಿರುವ ಉಡುಪನ್ನು ಧರಿಸಿ
• ಶೀತ ತರುವ ಪದಾರ್ಥಗಳನ್ನು ಸೇವಿಸಬೇಡಿ
• ಆರೋಗ್ಯಕರವಾದ ಹಣ್ಣುಗಳನ್ನು ಸೇವಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
• ಸಮಯಕ್ಕೆ ತಕ್ಕಂತೆ ಸ್ಟೀಮ್ ತೆಗೆದುಕೊಳ್ಳಿ.

೩. ಮಂಡಿ ಮತ್ತು ಕೈ ನೋವು.
ಚಳಿಗಾಲದಲ್ಲಿ ಮಂಡಿ ಮತ್ತು ಕೈಗಳನ್ನು ಕಾಣಿಸುವುದು ಬಹಳ ಸಹಜ ಅದರಲ್ಲೂ ವಯಸ್ಸಾದವರು ಚಳಿಗಾಲದಲ್ಲಿ ಹೆಚ್ಚಾಗಿ ತೊಂದರೆ ಪಡುತ್ತಾರೆ. ಇದನ್ನು ಹೇಗೆ ತಡೆಯುವುದು?

• ದಿನಕ್ಕೆ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ನಿಮಗೆ ಸುಲಭವಾದ ವ್ಯಾಯಾಮವನ್ನು ಮಾಡಿ ನಿಮ್ಮ ದೇಹವನ್ನು ಬೆಚ್ಚಗೆ ಮಾಡಿಕೊಳ್ಳಬೇಕು.
• ಹಾಗೂ ವಿಟಮಿನ್-ಡಿ ಒಳಗಾಗುವ ಪದಾರ್ಥಗಳನ್ನು ಸೇವಿಸಬೇಕು.

೪. ದೇಹದ ತೂಕ ಹೆಚ್ಚಾಗುವುದು.
ನೀವು ಗಮನಿಸಿದರೆ ಚಳಿಗಾಲದಲ್ಲಿ ನಮಗೆ ಹೆಚ್ಚು ಹಸಿವಾಗುತ್ತದೆ ಹಾಗೆಯೇ ಚಳಿ ಇರುವುದರಿಂದ ಎಣ್ಣೆಯ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೇವೆ ಹಾಗಾಗಿ ದೇಹದ ತೂಕ ಹೆಚ್ಚಾಗುತ್ತದೆ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾದ ನಿಯಮವೆಂದರೆ ವ್ಯಾಯಾಮ. ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವಿಸುವ ಹಾಗೆ ನಾವು ನೋಡಿಕೊಳ್ಳಬೇಕು.

ಚಳಿಗಾಲವೆಂದರೆ ತೊಂದರೆ ಎಂದು ತಿಳಿದವರು ಈ ಮೇಲಿನ ಸುಲಭವಾದ ಕ್ರಮಗಳನ್ನು ತೆಗೆದುಕೊಂಡು ಆರೋಗ್ಯದ ಕಡೆ ಗಮನ ನೀಡಿ.

– ತನ್ವಿ.ಬಿ

LEAVE A REPLY

Please enter your comment!
Please enter your name here