ತಮಿಳುನಾಡಿನ ಸುಜೀತಾ ಎಂಬಿಎ ಪದವೀಧರೆ ಇದೀಗ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

0

ಹಾಸನ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಮೊಹಮ್ಮದ್ ಸುಜೀತಾ ಅವರನ್ನು ನೂತನ ಎಸ್ಪಿಯಾಗಿ ನಿಯೋಜಿಸಲಾಗಿದೆ.

ಕೋಲಾರದಲ್ಲಿ ಎಸ್ಪಿಯಾಗಿ ಹಾಗೂ ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸಿರುವ ಮಹಮ್ಮದ್ ಸುಜೀತಾ ಇದೀಗ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾರೆ.

ತಮಿಳುನಾಡಿನ ಸುಜೀತಾ ಎಂಬಿಎ ಪದವೀಧರೆ. 2014 ಬ್ಯಾಚ್‌ ಎಎಸ್‌ಪಿಯಾಗಿ ನಂಜನಗೂಡಿನಲ್ಲಿ ಕರ್ತವ್ಯ ಆರಂಭಿಸಿದ್ದರು. ನಂತರ ಕೋಲಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದರು.

ಜಿಲ್ಲೆಯ ಪ್ರಮುಖ ಸ್ಥಾನಗಳಲ್ಲಿ ಇದೀಗ ಮಹಿಳೆಯರೇ ಅಧಿಕಾರಿಗಳಾಗಿದ್ದಾರೆ. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಬಿ.ಆರ್. ಪೂರ್ಣಿಮಾ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮೊಹಮ್ಮದ್‌ ಸುಜೀತಾ ಅವರು ಎಸ್ಪಿಯಾಗಿದ್ದಾರೆ.

LEAVE A REPLY

Please enter your comment!
Please enter your name here