ಕೊಲೆಯಾದ ಉದ್ಯಮಿ ಶ್ರೀರಾಮ ಮಾರ್ಬಲ್ಸ್ ಮಾಲೀಕರು ಕೃಷ್ಣೇಗೌಡ ( 55 )
ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಜೆಡಿಎಸ್ ಪಕ್ಷದ ಮುಖಂಡರು ರೇವಣ್ಣನವರ ಬಹಳ ಆಪ್ತರು ಆಗಿದ್ದ ಮೃದುಸ್ವಭಾವದ ಕೃಷ್ಣೇಗೌಡರ ಹತ್ಯೆ ವಿಷಯ ಕೇಳಿ ನಮಗೆಲ್ಲಾ ಆಶ್ಚರ್ಯವಾಯಿತು. ಬಹಳ ಶಾಂತಿ ಪ್ರಿಯರಾಗಿದ್ದ ಅವರು ಯಾರಿಗೂ ದ್ರೋಹ ಬಗೆದವರಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಕೂಡಲೇ ಆರೋಪಿಗಳನ್ನು ಬಂಧಿಸಿ ಅವರಿಗೆ ಕಠಿಣಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು. ಬಹಳ ಭೀಕರವಾಗಿ ಕೊಲೆ ಮಾಡಿದ್ದು, ಅವರು ಯಾವ ವಿಚಾರಕ್ಕು ಹೋಗದೇ ಅವರ ವ್ಯವಹಾರ ನೋಡಿಕೊಂಡು ಇದ್ದಂತವರು.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ಕೊಟ್ಟು ಅವರ ಆತ್ಮಕ್ಕೆ ಶಾಂತಿ ದೊರಕಲಿ. ಈಗಾಗಲೇ ವರಿಷ್ಠಾಧಿಕಾರಿಗಳ ಬಳಿಯೂ ಕೂಡ ಚರ್ಚೆ ಮಾಡಲಾಗಿದ್ದು, ರೇವಣ್ಣ ಅವರು ದೆಹಲಿಯಲ್ಲಿದ್ದು, ಎಸ್ಪಿಯವರ ಜೊತೆ ಮಾತನಾಡಿದ್ದಾರೆ ಎಂದರು. ವಯಕ್ತಿಕವಾಗಿ ಅವರಿಗೆ ಯಾವ ಧ್ವೇಷ ಇರಲಿಲ್ಲ ಎಂಬುದು. ಬಹಳ ಆಕ್ಟಿವಾಗಿ ಇದ್ದಂತವರು. ಕೊಲೆ ಆಗುವ ಮುನ್ನ ಯಾರು ಅವರನ್ನು ಫಾಲೋ ಮಾಡಿರುವುದಾಗಿ ಮಾಹಿತಿ ಇದ್ದು, ತುಂಬ ಕಷ್ಟಪಟ್ಟು ಮೇಲೆ ಬೆಳೆದು ಬಂದವರು. ಇಂತಹ ಮತ್ತೆ ಮರುಕಳಿಸುವುದು ಬೇಡ ಎಂದು ಹೇಳಿದರು.