ನಕಲಿ ಚಿನ್ನ ನೀಡಿ ಮೋಸ ಮಾಡಿದ್ದಲ್ಲದೆ ಹಲ್ಲೆ ಮಾಡಿ ಹಣ ಕಿತ್ತ ಕತರ್ನಾಕ್ ನ ಬಂಧನ

0

ಹಾಸನ / ಬೇಲೂರು: ಚಿನ್ನವನ್ನು ಹಾಫ್ ರೇಟಲ್ಲಿ ಕೊಡುತ್ತೇವೆ ಎಂದು ನಂಬಿಸಿ, ಬರೋಬ್ಬರಿ 12 ಲಕ್ಷ ಹಣ ಕಿತ್ತುಕೊಂಡು ಚಿನ್ನ ಕೊಳ್ಳಲು ಬಂದಿದವರ ಮೇಲೆ ಹಲ್ಲೆ ನಡೆಸಿದ, ಪ್ರಕರಣದ ಖದೀಮನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ

ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಬೀದರ್ ಲಾಲ್, ಅರ್ಜುನ್, ಕೀರ್ತಿ, ಶಿವಕುಮಾರ್ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಸೋಮಶೇಖರ ರೆಡ್ಡಿಗೆ ಕಳೆದ ಗುರುವಾರ 2sep2021 ರಂದು ಹಗರೆ ಸಮೀಪದ ಬಸವಪುರ ಕೆರೆಕೊಡಿ ಬಳಿ ಎರಡು ಚಿನ್ನದ ಗುಂಡುಗಳನ್ನು ಕೊಟ್ಟು ಪರಿಕ್ಷಿಸಿಕೊಂಡು ಬರಲು ಹೇಳಿದಾರೆ , ಅಂತಯೇ ಹಗರೆಯ ಜ್ಯುವೆಲ್ಲರಿ ಶಾಪ್ ಗೆ ಬಂದು ಪರೀಕ್ಷಿಸಿದಾಗ ಅವುಗಳ ನಿಜವಾಜ ಚಿನ್ನ ನೆ ಆಗಿದೆ . ಕೆಲವೊತ್ತಿನ ನಂತರ ನಕಲಿ ಚಿನ್ನದ ಗಂಟು ಬದಲಾಯಿಸಿ ಚಿನ್ನ ಕೊಳ್ಳಲು ಬಂದಿದ್ದ ರೆಡ್ಡಿ ಬಳಿ ಇದ್ದ 12 ಲಕ್ಷದ ಬ್ಯಾಗ್‌ ಕಿತ್ತಿದ್ದಾರೆ.

ವಿಷಯ ತಿಳಿದ ಹಾಸನ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ಆರೋಪಿ ಶಿವಕುಮಾರ್ ಎಂಬಾತನ ಬಂಧಿಸಿ ನ್ಯಾಯಾಂಗ ತನಿಖೆಗೆ ಅಟ್ಟಿದ್ದಾರೆ , ಇವನ ಹಿಂದೆ ಇನ್ನು ಯಾರಾದರೂ ಮೋಸದ ಜಾಲ ಇದೆಯೇ ತನಿಖೆ ನಂತರ ತಿಳಿಯಬೇಕಿದೆ.

ಕಾರ್ಯಾಚರಣೆಯಲ್ಲಿದ್ದ ಹಾಸನ ಪೊಲೀಸರು : ಗಿರಿಧರ್(PSI),  ಜಗದೀಶ್(ASI), ಸಿಬ್ಬಂಧಿಗಳು :  ಜಮೃದ್ ಖಾನ್, ಶಶಿಕುಮಾರ್, ರವೀಶ್, ಪುನೀತ್, ರವೀಶ್.ಎನ್, ರಘು,ದೇವರಾಜು,ನಿರುಪಾದಿ, ಮಲ್ಲಿಕಾರ್ಜುನ,ಸೋಮಶೇಖರ್,ರಾಜೇಂದ್ರ

ಇವರಿಗೆ ಹಾಸನ ಸಾರ್ವಜನಿಕರ ಪರವಾಗಿ ಧನ್ಯವಾದಗಳು

LEAVE A REPLY

Please enter your comment!
Please enter your name here