ನೋಡಲು ಸಣ್ಣದಾದ ಈ ಒಣ ದ್ರಾಕ್ಷಿ ನಮ್ಮ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ?

0

ಒಣ ದ್ರಾಕ್ಷಿ ಬಹಳ ಸಿಹಿ ತಿಂಡಿಗಳಲ್ಲಿ ಉಪಯೋಗಿಸುತ್ತಾರೆ.ಇದು ನೋಡಲು ಬಹಳ ರುಚಿಕರ ಹಾಗೆ ಬಹಳ ಸಣ್ಣವಾದ ಆಹಾರ.ಆದರೆ ಇದರಲ್ಲಿರುವ ಪೋಷಕಾಂಶ ಗುಣಗಳ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ.

ಹಲವರು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಕೊಂಡು ಸ್ವಲ್ಪ ಸಮಯದ ನಂತರ ಅದನ್ನು ಸೇವಿಸುತ್ತಾರೆ ಆದರೆ ಎಷ್ಟೋ ಜನಗಳಿಗೆ ಇದರ ಪ್ರಯೋಜನವೇ ತಿಳಿದಿರುವುದಿಲ್ಲ.

ಪ್ರಯೋಜನಗಳು:

ಜ್ವರ ಇಳಿಯಲು ಸಹಾಯಕಾರಿ:
ಈ ಕೋವಡ್ ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ನಾವು ಹೆಚ್ಚು ಕಾಳಜಿ ನೀಡಬೇಕು.ಯಾವುದೇ ರೀತಿಯ ಜ್ವರ ಬಂದರೂ ನಾವು ಒಣ ದ್ರಾಕ್ಷಿಯನ್ನು ಸೇರಿಸುವ ಮೂಲಕ ನಮ್ಮ ಜ್ವರವನ್ನು ನಾವು ಇಳಿಸಬಹುದು.ಇದರಲ್ಲಿರುವ ಕ್ರಿಮಿನಾಶಕ, ಆ್ಯಂಟಿ ಆಕ್ಸಿಡೆಂಟ್ ಸೋಂಕಿನಿಂದ ಒದಗಿಸುತ್ತದೆ.

ತೂಕ ಹೆಚ್ಚಿಸಿಕೊಳ್ಳಲು ಉಪಯೋಗಕಾರಿ :
ನಿಮ್ಮ ತೂಕ ಅಗತ್ಯಕ್ಕಿಂತ ಕಮ್ಮಿ ಇದ್ದರೆ ಚಿಂತಿಸಬೇಡಿ ಒಣದ್ರಾಕ್ಷಿ ತಿನ್ನುವ ಮೂಲಕ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಿ .ಒಣದ್ರಾಕ್ಷಿ ನಿಮಗೆ ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರಕ್ತಹೀನತೆಯ ಸಮಸ್ಯೆಯಿಂದ ಪಾರಾಗಲು ನೆರವಾಗುತ್ತದೆ:
ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಸಮಸ್ಯೆ ಎದುರಾಗುತ್ತದೆ ಒಣ ದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ವಿಟಮಿನ್ ಅಂಶಗಳು ಅಡಗಿವೆ.ನಿಮ್ಮ ರಕ್ತಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಅಂಶವೂ ಒಣ ದ್ರಾಕ್ಷಿ ಯಲ್ಲಿದೆ.

ಎಲುಬನ್ನು ಗಟ್ಟಿಮುಟ್ಟಾಗಿ ಮಾಡುತ್ತದೆ :
ಚಿಕ್ಕಮಕ್ಕಳಿಗೆ ಗಟ್ಟಿಮುಟ್ಟಾದ ಎಲುಬು ಬೇಕಾದರೆ ಒಣದ್ರಾಕ್ಷಿಯನ್ನು ಸೇವಿಸುವುದು ಉಪಯೋಗಕಾರಿ ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ, ಪೊಟಾಸಿಯಂ ಮತ್ತು ಬೋರಾನ್ ಅಂಶ ಅಡಗಿದೆ .


ಒಣ ದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದು ನಿಮ್ಮ ಆಹಾರದಲ್ಲಿ ಒಣದ್ರಾಕ್ಷಿಯನ್ನು ಬಳಸಿ.

-ತನ್ವಿ. ಬಿ

LEAVE A REPLY

Please enter your comment!
Please enter your name here