ನೋಡ್ರಿ ನನ್ನ ನಿಲುವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡ್ರೆ ಸ್ಪರ್ಧೆ ಮಾಡಬೇಕು ಅಷ್ಟೆ

0

ಹಾಸನ ನಗರದ ಡಿಸಿ ಕಛೇರಿ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ಸಿ.ಎಂ. ಇಬ್ರಾಹಿಂ ಉಚ್ಛಾಟನೆ ಹಾಗೂ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಮಾತನಾಡುತ್ತಾ, ಹಲವಾರು ಮೀಟಿಂಗ್‌ಗಳು ಆಗಿವೆ, ಎಲ್ಲಾ ಮೀಟಿಂಗ್‌ಗಳಲ್ಲಿಯೂ ಅವರ ಅಧ್ಯಕ್ಷತೆಯಲ್ಲಿ ಆಗಿವೆ, ಅವರು ಎಲ್ಲಾ ಮೀಟಿಂಗ್‌ಗಳಲ್ಲೂ ಸಿಎಂ ಇಬ್ರಾಹಿಂ ಇದ್ರು. ಚರ್ಚೆ ಮಾಡಿದಾಗ ಅವರು, ನಾನು ಭಾಗಿಯಾಗಿದ್ದೇವೆ. ಯಾವ ಮೀಟಿಂಗ್‌ನಲ್ಲೂ ಹೊಂದಾಣಿಕೆ ಆಗಬಾರದು ಎಂದು ಹೇಳಲಿಲ್ಲ. ಏನು ಹೇಳದಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ. ಅವರು ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು. ಅವರು ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ತರವಲ್ಲ. ನಾನು ಸಭೆಯಲ್ಲಿದ್ದೀನಿ, ಅವರು ಸಭೆಯಲ್ಲಿದ್ದಾರೆ, ಅವರೇ ಭಾಷಣ ಮಾಡಿದ್ದಾರೆ. ಈಗ ಅವರು ಬಿಜೆಪಿ ಹೋಗುವುದು ತಪ್ಪು ಎಂದು ಹೇಳುವುದು ಒಳ್ಳೆಯದಲ್ಲ. ನಾನೇ ಮೊದಲು ವಿರೋಧ ಇದ್ದೆ, ನಾನೇ ಅಡ್ಜಸ್ಟ್ ಆಗಿದ್ದೀನಿ, ಅದಕ್ಕಿಂತ ಉದಾಹರಣೆ ಏನು ಬೇಕು ಎಂದರು.

ಇವತ್ತು ರಾಜಕೀಯದಲ್ಲಿ ಶತ್ರುನು ಇಲ್ಲಾ, ಮಿತ್ರನೂ ಇಲ್ಲಾ. ಈಗ ನಮ್ ಕಣ್ಣ ಮುಂದೆ ಕಾಣ್ತಿರುವುದು ಪಾರ್ಟಿ. ವ್ಯಯಕ್ತಿಕ ಹಿತಾಸಕ್ತಿಗಿಂತ ಸದ್ಯ ನಮಗೆ ದೇಶ ಮುಖ್ಯ ಅಷ್ಟೆ . ಆ ದೃಷ್ಠಿಯಲ್ಲಿ ಒಂದಾಗಬೇಕು ಎಂದು ಇಬ್ಬರು ಕೂಡು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಅವರವರ ಪಕ್ಷ ಅವರವರು ತೀರ್ಮಾನ ತಗೊತರೆ. ಕೆಲವರದ್ದು ವೈಯುಕ್ತಿಕ ನಿರ್ಧಾರ ಇರುತ್ತೆ. ಇಬ್ರಾಹಿಂ ಯಾಕೆ ಆ ರೀತಿ ಹೇಳಿದ್ದಾರೆ ಅನ್ನೋದನ್ನ ಅವರೇ ಹೇಳಬೇಕು. ಎನ್‌ಡಿಎ ಜೊತೆ ಹೋಗುವುದು ಇಷ್ಟ ಇಲ್ಲಾ ಎಂದು ಇಬ್ರಾಹಿಂ ಹೇಳಿದಾಗ ಅವರ ಬದಲು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಪಕ್ಷದ ಜವಾಬ್ದಾರಿ. ಆ ಪಕ್ಷದ ಜವಾಬ್ದಾರಿ ಮೇಲೆ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದೇವೆ. ಅದರಲ್ಲಿ ತಪ್ಪೇನು ಇಲ್ಲವಲ್ಲಾ. ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆ. ಹಿಂದೆ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ. ಈಗ ಯಾಕೆ ಅದರ ಬಗ್ಗೆ ಮಾತನಾಡುತ್ತಾರೆ. ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ. ಆ ಪಕ್ಷದ ಶಕ್ತಿಯನ್ನು ಹೆಚ್ಚಿಗೆ ಮಾಡಲು ಮುಂದಾಗಿದ್ದಾರೆ ಎಂದರು. ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯಾತೀತ ತತ್ವ ಬದಲಾವಣೆ ಆಗಲ್ಲ. ಉದಾಹರಣೆಗೆ ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ, ನನ್ನ ಇನ್ಸಿಲ್ ಚೇಂಜ್ ಆಗುತ್ತಾ! ಅದಕ್ಕೂ, ಇದಕ್ಕೂ ಸಂಬಂಧವಿಲ್ಲ.

ಮಗನಿಗಾಗಿ ನಮ್ಮ ಮನೆ ಹಾಳು ಮಾಡಿದರು ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಅವರು ಮಗನನ್ನು ಅದೇ ಪಾರ್ಟಿನಲಿ ಎಂಎಲ್‌ಎಗೆ ನಿಲ್ಲಿಸಿರಲಿಲ್ವಾ. ಹೇಗೆ ಆ ರೀತಿ ಮಾತನಾಡುತ್ತಾರೆ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ವಿಮಾನಯಾನ ಖಾತೆ ಸಚಿವರಾಗಿದ್ರು. ಆಗ ಯಾರ ಮನೆ ಉದ್ಧಾರ ಆಯ್ತು. ತೊಂದರೆಯಾದಾಗ ವೈಯುಕ್ತಿಕ ವಿಚಾರ ಮಾತನಾಡುವುದು ಸರಿಯಲ್ಲ. ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ಅವರ ಹತ್ರನೇ ಹೌಸ್‌ಫುಲ್, ನನ್ನನ್ನು ಯಾಕೆ ಕರಿತರೆ. ಅಲ್ಲಿಂದ ಹೋಗುವವರನ್ನು ತಡೆ ಹಿಡಿಯಲು ಈ ರೀತಿ ಮಾಡುತ್ತಿದ್ದಾರೆ ಎಂದಿದ್ದರು ಎಂದು ಇಬ್ರಾಹಿಂ ಹೇಳಿಕೆಗೆ ಶಾಸಕ ಎ.ಮಂಜು ತಿರುಗೇಟು ನೀಡಿದರು.

ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದು, ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ. ಇವತ್ತು ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್. ಅವರು ಈ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ. ಹಾಸನದಿಂದ ದೇವೇಗೌಡರು ಚುನಾವಣೆಗೆ ನಿಲ್ಲಬೇಕೆಂದು ಜೆಡಿಎಸ್ ಶಾಸಕರು ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಸ್ಪರ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಯಾರು ಯಾರ ಮೇಲೆ ಬೇಕಾದರೂ ಕೇಸ್ ಹಾಕಬಹುದು. ಇದು ಹೊಸ ಕೇಸ್ ಅಲ್ಲಾ, ಹಳೇದೆ. ಯಾಕೆ ತನಿಖೆ ಮಾಡ್ತೀರಿ? ಅಂತ ಸಿಬಿಐನವರನ್ನು ಕೇಳಲು ಯಾರಿಗೂ ಅಧಿಕಾರ ಇಲ್ಲಾ. ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗ್ತಾರೆ ಅಂದರು, ಅವರೇನು ಜಡ್ಜ್ ಅಂಥಾ ಡಿಕೆಶಿ ಅಂದ್ರು ಅದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಅವರವರ ಭಾವನೆಯಲ್ಲಿ ಅವರು ಮಾತನಾಡ್ತಾರೆ. ಸಿಬಿಐ ತನಿಖೆ ಮಾಡುವುದರ ಬಗ್ಗೆ ನಾನು ಕಮೆಂಟ್ ಮಾಡಲ್ಲ.

ಅರಸೀಕೆರೆಗೆ ಮಾತ್ರ ಸಚಿವರುಗಳು ಭೇಟಿ ನೀಡಿತ್ತಿರುವುದಕ್ಕೆ ಶಾಸಕ ಎ.ಮಂಜು ಗರಂ ಆಗಿ ಮಾತನಾಡಿದರು.
ನಾನು ಜಿಲ್ಲಾ ಮಂತ್ರಿಯಲ್ಲಿ ಮನವಿ ಮಾಡುತ್ತೇನೆ. ನೀವು ತಾಲ್ಲೂಕು ಮಂತ್ರಿ ಅಲ್ಲಾ, ಜಿಲ್ಲಾ ಮಂತ್ರಿ, ರಾಜ್ಯಕ್ಕೆ ಮಂತ್ರಿ. ಎಲ್ಲಾ ತಾಲ್ಲೂಕುಗಳಿಗೆ ನೀವು ಬರಬೇಕು. ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ ಅಂತ ಅತಿ ಪ್ರೀತಿ ತೋರಿಸುವುದು ಒಳ್ಳೆಯದಲ್ಲ ಎಂದು ಈಗಾಗಲೇ ಅವರಿಗೆ ಮನವಿ ಮಾಡಿದ್ದೇನೆ. ಇಡೀ ಜಿಲ್ಲೆಯನ್ನು ಸಮಗ್ರವಾಗಿ ತೆಗೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿ. ನಾವು ಅವರಿಗೆ ಸಹಕಾರ ಕೊಡಲು ಸಿದ್ದರಿದ್ದೇವೆ. ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿ ವಿಚಾರವಾಗಿ ರೇವಣ್ಣ ಅವರು ಮೀಟಿಂಗ್ ಬರಲಿಲ್ಲ. ನಾವು ಮೀಟಿಂಗ್‌ನಲ್ಲಿ ನೀರು ಬಿಡಿಸಲು ತೀರ್ಮಾನ ಮಾಡಿದ್ದೇವೆ. ಆರು ದಿನ ಮೊದಲು ಹೈ ಲೆವೆಲ್ ಕೆನಲ್‌ಗೆ ನೀರು ಬಿಡ್ತಾರೆ. ಮಿಕ್ಕಿದ ಕೆನಲ್‌ಗಳಿಗೆ ಆರು ದಿನ ಆದ್ಮೇಲೆ ಬಿಡ್ತಾರೆ. ಈಗಾಗಲೇ ಸರ್ಕಾರ ಕೆರೆ ತುಂಬಿಸಲು ನೀರು ಬಿಡುತ್ತಿರುವುದು ಯಾರು ಕೂಡ ಬೆಳೆ ಬೆಳೆಯಬಾರದು ಎಂದು ಹೇಳಿದ್ದೇನೆ. ಮಾರ್ಚ್‌ವರೆಗೂ ಕುಡಿಯುವ ನೀರು ಇಟ್ಕಂಡು ಈಗಿರುವ ನೀರಿನಲ್ಲಿ ಮೂರು ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಿಡ್ತಾರೆ. ಈಗಾಗಲೇ ಹೈಲೆವೆಲ್ ಕೆನಲ್‌ಗೆ ನೀರು ಬಿಟ್ಟಿದ್ದಾರೆ ಎಂದು ಮಾಹಿತಿ ಕೊಟ್ಟರು.

LEAVE A REPLY

Please enter your comment!
Please enter your name here