ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ಡ್ರೋನ್ ತಂತ್ರಜ್ಞಾನದ ಮೊರೆ ಹೋದ ರೈತರು

0

ಹಾಸನ: ಹಾಸನ ತಾಲೂಕಿನ ಶಾಂತಿಗ್ರಾಮ, ಮೆಳಗೋಡು ಮತ್ತು ಗಾಡೇನಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ತಮ್ಮ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಮಯ ಉಳಿತಾಯ, ಕೂಲಿ ಕಾರ್ಮಿಕರ ಸಮಸ್ಯೆ, ಹಣ ಉಳಿತಾಯ ಸೇರಿದಂತೆ ಅನೇಕ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೈತರು ಡ್ರೋನ್ ತಂತ್ರಜ್ಞಾನದ ಮೂಲಕ ಬೆಳೆಗಳಿಗೆ ಔಷಧ ಸಿಂಪಡಣೆ ಮಾಡಲು ಮುಂದಾಗಿದ್ದಾರೆ. ಹಾಸನ ತಾಲೂಕಿನ ಗಾಡೇನಹಳ್ಳಿ ಗ್ರಾಮದ ರೈತ ವೆಂಕಟಸ್ವಾಮಿ ಅವರು ತಮ್ಮ ಶುಂಠಿ ಬೆಳೆಗೆ ಔಷಧಿ ಸಿಂಪಡಣೆ ಮಾಡಲು ಡ್ರೋನ್ ಬಳಕೆ ಮಾಡಿದ್ದಾರೆ.

ಬೆಳೆಗೆ ಡ್ರೋನ್ ಮೂಲಕ ಕೇವಲ 5 ರಿಂದ 6 ನಿಮಿಷದಲ್ಲಿ ಒಂದು ಎಕರೆಗೆ ಔಷಧ ಸಿಂಪಡಣೆ ಮಾಡಲು ಸಾಧ್ಯವಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆಗೆ ರೋಗ ಬಂದರೇ ಔಷಧ ಸಿಂಪಡಣೆ ಮಾಡುವುದೇ ರೈತರಿಗೆ‌ ಸವಾಲಿನ ಕೆಲಸವಾಗಿದೆ. ಒಂದು ವೇಳೆ ಔಷಧ ಸಿಂಪಡಣೆ ಮಾಡದಿದ್ದರೇ ಬೆಳೆಯ ಇಳುವರಿ ಕುಂಠಿತವಾಗುತ್ತದೆ ಹಾಗೂ ಲಾಭದ ನಿರೀಕ್ಷೆ ಹುಸಿಯಾಗುತ್ತದೆ. ಹಾಗಾಗಿ ರೈತರು ತಾವು ಬೆಳೆಗೆ ಬೆಳವಣಿಗೆ ಹಾಗೂ ಸಮಯಕ್ಕೆ ತಕ್ಕಂತೆ ಔಷಧ ಸಿಂಪಡಣೆ ಮಾಡುತ್ತಾರೆ. ಔಷಧ ಸಿಂಪಡಣೆ ಮಾಡಲು ದಿನವಿಡೀ ಬೆನ್ನು ಮೇಲೆ ಟ್ಯಾಂಕ್ ಹೊತ್ತುಕೊಂಡು ಔಷಧ ಸಿಂಪಡಣೆ ಮಾಡಬೇಕಾಗುತ್ತದೆ.

ಈ ವಿಧಾನದಿಂದ ರೈತರಿಗೆ ಆರೋಗ್ಯ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ರೈತರ ಇವೆಲ್ಲಾ ಸಮಸ್ಯೆಗಳಿಗೆ ತಪ್ಪಿಸಿಕೊಳ್ಳಲು ಡ್ರೋನ್ ಮೂಲಕ ಕೆಲವೇ ಸಮಯದಲ್ಲಿ ಔಷಧ ಸಿಂಪಡಣೆ ಮಾಡಬಹುದು ಎನ್ನುತ್ತಾರೆ ರೈತ ವೆಂಕಟಸ್ವಾಮಿ. ಬೈಟ್ :ವೆಂಕಟಸ್ವಾಮಿ, ಗಾಡೇನಹಳ್ಳಿ ಗ್ರಾಮದ ರೈತ.

ಬಾಡಿಗೆಗೂ ಲಭ್ಯ: ಅವಶ್ಯಕತೆ ಇರುವ ರೈತರಿಗೆ ಎಕರೆಗೆ 500 ರೂಪಾಯಿ ಪಡೆದು ಅವರ ಜಮೀನಿಗೆ ತೆರಳಿ ನಾವೇ ಕ್ರಿಮಿನಾಶಕ ಔಷಧ ಸಿಂಪಡಣೆ ಮಾಡುತ್ತೇವೆ ಈ ಡ್ರೋನ್​ ಏಳು ನಿಮಿಷಕ್ಕೆ ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸುತ್ತದೆ ಎನ್ನುತ್ತಾರೆ ಡ್ರೋನ್ ಮಾಲೀಕ ಮೋಹನ್ ಕುಮಾರ್.

ಬೈಟ್ :ಮೋಹನ್ ಕುಮಾರ್, ಡ್ರೋನ್ ಮಾಲೀಕ. ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮೂಲಕ ಸಮಯ ಉಳಿತಾಯ ಅಷ್ಟೇ ಅಲ್ಲ, ಆಳುಗಳಿಗೆ ಕೊಡಬೇಕಾದ ಹೆಚ್ಚುವರಿ ಹಣವೂ ಸಹ ರೈತನಿಗೆ ಉಳಿತಾಯವಾಗುತ್ತೆ. ಇದರಿಂದ ಹಲವು ರೈತರು ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ಡ್ರೋನ್ ಮೂಲಕವೇ ಕ್ರಿಮಿನಾಶಕ ಸಿಂಪಡಣೆ ಮಾಡುವ ಉತ್ಸಾಹ ಹೊಂದಿದ್ದಾರೆ ಇಲ್ಲಿನ ರೈತರು.

LEAVE A REPLY

Please enter your comment!
Please enter your name here