ಹಾಸನ : ಭೀಮನ ಆರೋಗ್ಯದಲ್ಲಿ ಕೊಂಚ ಚೇತರಿಕೆ. ನಿಧಾನವಾಗಿ ವಾಸಿಯಾಗುತ್ತಿರುವ ಗಾಯ. ಗಾಯದ ನೋವಿನಿಂದ ಬಳುತ್ತಿರುವ ಭೀಮ, ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಆಚಗೋಡನಹಳ್ಳಿ ಬಳಿ ಇರುವ ಒಂಟಿಸಲಗ. ಗಾಯದ ಕೊಂಚ ವಾಸಿಯಾಗುತ್ತಲೆ ಓಡಾಟ ಆರಂಭಿಸಿರುವ ಭೀಮ. ಕಾಡಿನಲ್ಲೇ ಓಡಾಡುತ್ತಿರುವ ಭೀಮ.
ಆ.31 ರಂದು ಚಿಕಿತ್ಸೆ ನೀಡುವ ಕಾರ್ಯಾಚರಣೆ ವೇಳೆ ಶಾರ್ಪ್ ಶೂಟರ್ ವೆಂಕಟೇಶ್‌ರನ್ನು ಬಲಿ ಪಡೆದಿದ್ದ ಒಂಟಿಸಲಗ. ವೆಂಕಟೇಶ್ ಸಾವಿನ ಬಳಿಕ ಚಿಕಿತ್ಸೆ ನೀಡುವುದನ್ನೇ ನಿಲ್ಲಿಸಿದ್ದ ಅರಣ್ಯ ಇಲಾಖೆ. ಗಾಯ ಉಲ್ಬಣಿಸಿ ಓಡಾಡಲು ಆಗದೆ ಒಂದೇ ಕಡೆ ನಿಂತಿದ್ದ ಭೀಮ. ಇದೀಗ ಓಡಾಟ ಆರಂಭಿಸಿರುವ ಒಂಟಿಸಲಗ.