ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಚುನಾವಣೆ ನಡೆದಿದೆ- ಜಿಲ್ಲಾಧಿಕಾರಿ

0

ಜಿಲ್ಲೆಯಲ್ಲಿ ಎರಡು ಹಂತಗಳ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಒಟ್ಟಾರೆ ಶೇ.87.24 ರಷ್ಟು ಮತದಾನವಾಗಿದೆ. ಡಿ 30 ರಂದು ಆಯಾಯ ತಾಲ್ಲೂಕು ಕೇಂದ್ರದಲ್ಲಿ ಮತದಾನ ಎಣಿಕೆ ಕಾರ್ಯಗಳನ್ನು ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹಾಸನ,ಅರಕಲಗೂಡು, ಚನ್ನರಾಯಪಟ್ಟಣ ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಡಿ. 22 ರಂದು ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 896 ಮತಗಟ್ಟೆಗಳಲ್ಲಿ 87.05 ರಷ್ಟು ಮತ ಚಲಾವಣೆಯಾಗಿದೆ ಅದೇ ರೀತಿ ಅರಸೀಕೆರೆ, ಬೇಲೂರು, ಆಲೂರು, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಡಿ. 27ರಂದು ನಡೆದ ಎರಡನೇ ಹಂತದ ಮತದಾನ ಪ್ರಕ್ರಿಯೆ 905 ಮತಗಟ್ಟೆಗಳಲ್ಲಿ ಶೇಕಡ 87.44 ಮತ ಚಲಾವಣೆಯಾಗಿದೆ ಎಂದರು.
ಮೊದಲನೇ ಹಂತದಲ್ಲಿ 31 ಮಂದಿ ಕೋವಿಡ್ ಸೋಂಕಿತರು ಮತಚಲಾವಣೆ ಯಗಿದ್ದು ಎರಡನೇ ಹಂತದ ತಾಲ್ಲೂಕುಗಳಲ್ಲಿ 21 ಕೋವಿಡ್ ಸೋಂಕಿತರು ಮತದಾನ ಮತಚಲಾವಣೆ ಮಾಡಿದ್ದಾರೆ ಎಂಧು ಜಿಲ್ಲಾಧಿಕಾರಿ ತಿಳಿಸಿದರು.

ನಡೆದ ಮೊದಲನೇ ಹಂತದ ಚುನಾವಣೆ ಕಾರ್ಯಕ್ಕೆ 3944 ಮಂದಿ ಹಾಗೂ ಡಿ. 27 ರಂದು ಎರಡನೇ ಹಂತದ ಚುನಾವಣೆಯಲ್ಲಿ 3982 ಸಿಬ್ಬಂದಿಗಳು ಸೇರಿದಲಿ ಜಿಲ್ಲೆಯಲ್ಲಿ ಒಟ್ಟು 7926 ಮತದಾನ ಸಿಬ್ಬಂದಿಗಳನ್ನು ನೇಮಕಮಾಡಲಾಗಿತು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಮಾಹಿತಿ ನೀಡಿದರು
ಪ್ರತಿ ತಾಲೂಕಿನಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ಮತ ಎಣಿಕೆ ಕಾರ್ಯದ ಕುರಿತು ತರಬೇತಿ ನೀಡಲಾಗುತ್ತದೆ ಎಂದರು.

ಡಿ.30 ರಂದು ಮತ ಎಣಿಕೆ ನಡೆಸಿ ಫಲಿತಾಂಶ ಘೋಷಣೆ ಮಾಡಲಾಗುವುದು ಆಯಾ ತಾಲ್ಲೂಕಿನಲ್ಲಿ ಮತ ಎಣಿಕೆ ಕೇಂದ್ರಗಳನ್ನು ಈಗಾಗಲೇ ಗುರುತಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಚುನಾವಣೆ ನಡೆದ ಕ್ಷೇತ್ರಗಳಿಗೆ ಅನುಗಣವಾಗಿ ಟೇಬಲ್‍ಗಳನ್ನು ಅಳವಡಿಸಿಕೊಂಡು ಎಣಿಕೆ ಕಾರ್ಯ ನಡೆಸಲಾಗುವುದು ಎಂದು ಅವರು ಹೇಳೀದರು.
ಜಿಲ್ಲೆಯಲ್ಲಿ ಒಟ್ಟು 7 ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಅವರು ಹೇಳಿದರು.

ಮತ ಎಣಿಕೆ ಕೇಂದ್ರಗಳ ವಿವರ :- ಹಾಸನ-ಸರ್ಕಾರಿ ಕಲಾ ಕಾಲೇಜು ಒಟ್ಟು 65 ಟೇಬಲ್‍ಗಳು 195 ಸಿಬ್ಬಂದಿಗಳು, ಅರಸೀಕೆರೆ-ಸೆಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಚನ್ನರಾಯಪಟ್ಟಣ – ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಹೊಳೆನರಸೀಪುರ – ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 50 ಟೇಬಲ್‍ಗಳು 150 ಸಿಬ್ಬಂದಿಗಳು, ಆಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 30 ಟೇಬಲ್‍ಗಳು 90 ಸಿಬ್ಬಂದಿಗಳು, ಅರಕಲಗೂಡು-ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 93 ಟೇಬಲ್‍ಗಳು 279 ಸಿಬ್ಬಂದಿಗಳು, ಬೇಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 74 ಟೇಬಲ್‍ಗಳು 222 ಸಿಬ್ಬಂದಿಗಳು, ಸಕಲೇಶಪುರ-ಸಂತ ಜೋಸೆಫ್ ಶಾಲೆಯಲ್ಲಿ ಒಟ್ಟು 33 ಟೇಬಲ್ 99 ಸಿಬ್ಬಂದಿಗಳು. ಒಟ್ಟು 08 ತಾಲ್ಲೂಕುಗಳಲ್ಲಿ 521 ಟೇಬಲ್‍ಗಳು 1563 ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಭಾರತಿ ಚುನಾವಣಾ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಹಾಗೂ ಮತ್ತಿತರರು ಹಾಜರಿದ್ದರು

LEAVE A REPLY

Please enter your comment!
Please enter your name here