ಮಹಿಳೆಯರಲ್ಲಿ 5ಮುದ್ದೆ ತಿಂದು ಸ್ಪರ್ಧೆ ಗೆದ್ದರು
ಪುರುಷರಲ್ಲಿ ಬರೋಬ್ಬರಿ 9ಮುದ್ದೆ ನಾಟಿ ಕೋಳಿ ಸಾಂಬಾರಿನೊಂದಿಗೆ ತಿಂದು ಸ್ಪರ್ಧೆ ಗೆದ್ದ ಹೈದ
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ವೈಷ್ಣವಿ ಮ್ಯೂಸಿಕಲ್ ಇವೆಂಟ್ಸ್, ನಾಡಪ್ರಭು ಕೆಂಪೇಗೌಡ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಸಾಯಿ ಎಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೆಯೆನ್ಸಸ್ ಹೊಳೆನರಸೀಪುರ ಇವರಪ್ರಾಯೋಜಕತ್ವದಲ್ಲಿ ಪಟ್ಟಣದ ಕಾಲುವೆ ಏರಿ ಬೀದಿಯಲ್ಲಿ ಮಂಗಳವಾರ ರಾಗಿ ಮುದ್ದೆ ನಾಟಿ ಕೋಳಿ ಸಾಂಬಾರು ಮತ್ತು ಸೊಪ್ಪು ಸಾಂಬಾರ್ ಸ್ಪರ್ಧೆ ಆಯೋಜಿಸಲಾಗಿತ್ತು
ಸ್ಪರ್ಧೆಯಲ್ಲಿ ಗಂಡಸರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಮಹಿಳಾ ವಿಭಾಗದಲ್ಲಿ ಜಯಮ್ಮ ಎಂಬ ಮಹಿಳೆ ಐದು ಮುದ್ದೆ ತಿನ್ನುವ ಮೂಲಕ ಪ್ರಥಮ, ಯಶೋದಮ್ಮ ದ್ವಿತೀಯ, ಬಸಮ್ಮ ತೃತೀಯ ಸ್ಥಾನ ಪಡೆಯುವ ಮೂಲಕ ವಿಜಯಿಯಾದರು.
ರಾಮೇಗೌಡ ಎಂಬಾತ 9 ರಾಗಿಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ ಮುಂಜೇಗೌಡ ಎಂಟು ಮುದ್ದೆ ನುಂಗುವ ಮೂಲಕ ದ್ವಿತೀಯ ಸ್ಥಾನ ಹಾಗೂ ಶ್ರೀನಿವಾಸ್ ಮೂರ್ತಿ ಏಳು ಮುದ್ದೆ ಸೇವಿಸುವ ಮೂಲಕ ತೃತೀಯ ಸ್ಥಾನ ಗಳಿಸಿದ್ದರು.