ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಕಾಲಕ್ಕೆ ಬಾರದೆ ಕೈಕೊಟ್ಟ ಮಳೆಯಿಂದ ರಾಜ್ಯದಲ್ಲಿ ಬರ ಆವರಿಸಿದ್ದು, ಮೊದಲ ಹಂತದಲ್ಲಿ 195 ತಾಲೂಕು ಹಾಗೂ ಎರಡನೇ ಹಂತದಲ್ಲಿ 21ತಾಲೂಕುಗಳನ್ನು ಬರಪೀಡಿತ ತಾಲೂಕಾಗಿ ಸರ್ಕಾರ ಘೋಟಣೆ ಮಾಡಿದೆ. ಕೇಂದ್ರ ಬರ ಅಧ್ಯಯನ ತಂಡವೂ ಭೇಟಿ ನೀಡಿ ಹೋಗಿದೆ. ಬರಪರಿಹಾರವಾಗಿ 5 ಸಾವಿರದ 21 ಕೋಟಿ ರೂ ನೀಡುವಂತೆ ಕೇಂದ್ರಕ್ಕೆ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರನ್ನು, ಕಾರ್ಯದರ್ಶಿಗಳನ್ನು ಬೇಟಿ ಮಾಡಲು ನಾನು ಮತ್ತು ಸಚಿವ ಕೃಷ್ಣೆಬೈರೈಗೌಡರು ಸಮಯ ಕೇಳಿದ್ದೇವೆ.
ಆದರೆ ಕೇಂದ್ರ ಸಚಿವರ ಸಮಯ ನೀಡುತ್ತಿಲ್ಲ. ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಸಕಲೇಶಪುರ ಸಾಧರಣ ಎಂದು ಘೋಷಣೆ ಮಾಡಲಾಗಿದೆ. ಅದನ್ನು ಸಹ ಪೂರ್ಣ ಬರವೆಂದು ಘೋಷಣೆ ಮಾಡಲಾಗುವುದು ಎಂದರು