ಸಕ್ಕರೆಗಿಂತ ಬೆಲ್ಲ ಏಕೆ ಉತ್ತಮ?

0

ನಮ್ಮ ಭಾರತದಲ್ಲಿ ಹಿರಿಯರು ತಮ್ಮ ಊಟದ ಕೊನೆಯಲ್ಲಿ ಬೆಲ್ಲವನ್ನು ಸೇವಿಸುವ ಪದ್ಧತಿಯನ್ನು ಈಗಲೂ ಪಾಲಿಸುತ್ತಾರೆ. ಈ ಅಭ್ಯಾಸ ಏಕೆ? ಬೆಲ್ಲ ಯಾಕಿಷ್ಟು ಉಪಯೋಗಕಾರಿ?

ಬೆಲ್ಲ ಕೇಂದ್ರಾಪಗಾಮಿ ಕಬ್ಬಿನ ಸಕ್ಕರೆ. ನಮ್ಮ ಭಾರತದಲ್ಲಿ ಬೆಲ್ಲಕ್ಕೆ ಹೆಚ್ಚು ಪ್ರಾಮುಖ್ಯತೆಯಿದೆ. ಇದು ಸಿಹಿಯಾದರೂ ಸಕ್ಕರೆಗಿಂತ ಬಹಳ ಉತ್ತಮ ಹಾಗೂ ರುಚಿಕರ. ಹೆಚ್ಚು ಸಕ್ಕರೆ ನಮ್ಮದೇಹಕ್ಕೆ ಹಾನಿಕಾರಿ ಆದರೆ ಬೆಲ್ಲದ ಉಪಯೋಗಗಳು ನಾವು ತಿಳಿಯಲೇಬೇಕು.

ಬೆಲ್ಲದಲ್ಲಿ ಆಂಟಿಆಕ್ಸಿಡೆಂಟ್ ,ಸೆಲೆನಿಯಮ್ , ಮತ್ತು ಜಿಂಕ್ ಹೆಚ್ಚು ಪ್ರಮಾಣದಲ್ಲಿದೆ ಆದ್ದರಿಂದ ನಮ್ಮ ದೇಹದ ಹಲವಾರು ಭಾಗಗಳಿಗೆ ಉಪಯೋಗವಾಗುತ್ತದೆ.

ಉಪಯೋಗಗಳು:

• ಮಲಬದ್ಧತೆಯನ್ನು ತೊಲಗಿಸುತ್ತದೆ:
ಬೆಲ್ಲ ಜೀರ್ಣಕ್ರಿಯೆಗೆ ಬಹಳ ಉಪಯೋಗಕಾರಿ. ಇದು ಜೀರ್ಣಕ್ರಿಯೆಯ ಕ್ರಮವನ್ನು ಸುಧಾರಿಸುತ್ತದೆ ಹಾಗಾಗಿ ಊಟದ ನಂತರ ಚಿಕ್ಕ ಬೆಲ್ಲದ ತುಂಡನ್ನು ಸೇವಿಸಿದರೆ ನಮ್ಮ ಜೀರ್ಣಕ್ರಿಯೆ ಬಹಳ ಸುಲಭವಾಗಿ ನಡೆಯುತ್ತದೆ.

• ರಕ್ತವನ್ನು ಶುದ್ಧೀಕರಿಸುತ್ತದೆ:
ಬೆಲ್ಲ ನಮ್ಮ ರಕ್ತವನ್ನು ಶುದ್ಧೀಕರಿಸುವುದರಿಂದ. ನಮಗೆ ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ ಹಾಗೂ ನಾವು ಹಲವಾರು ರೋಗದಿಂದ ಪಾರಾಗಬಹುದು.

• ಉಸಿರಾಟ ತೊಂದರೆಗಳನ್ನು ತಡೆಗಟ್ಟುತ್ತದೆ:
ಬೆಲ್ಲದ ಸೇವನೆಯಿಂದ ಆಸ್ತಮಾ, ಬ್ರೊಂಚಿಟ್ಸ್ ಕಾಯಿಲೆಗಳನ್ನು ನಾವು ಸಲೀಸಾಗಿ ತಡೆಗಟ್ಟಬಹುದು ಇದು ಉಸಿರಾಟದ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

• ಕೀಳು ನೋವು ಸಮಸ್ಯೆಯಿಂದ ಮುಕ್ತಿ ನೀಡುತ್ತದೆ:
ವಯಸ್ಸಾದವರಿಗೆ ಕೀಳು ನೋವು ಬಹಳ ಸಹಜ ಬೆಲ್ಲದ ಸೇವನೆಯಿಂದ ನಿಮ್ಮ ಮೂಳೆಗಳು ಬಹಳ ಬಲವಾಗುತ್ತದೆ. ಬೆಲ್ಲವನ್ನು ಹಾಲಿನ ಜೊತೆಗೆ ಸೇವಿಸಿ ನಿಮ್ಮ ಕೀಳು ನೋವು ಸಮಸ್ಯೆಯನ್ನು ಪಾರಾಗಬಹುದು.

ಸಕ್ಕರೆಗಿಂತ ಬೆಲ್ಲ ಏಕೆ ಆರೋಗ್ಯಕರ?
ಬೆಲ್ಲ ಮತ್ತು ಸಕ್ಕರೆ ಎರಡು ಕಬ್ಬಿನಿಂದ ಲೆ ತಯಾರಾಗುತ್ತದೆ ಆದರೂ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ದೇಹ ಸಕ್ಕರೆಯನ್ನು ಬಹಳ ವೇಗವಾಗಿ ಹೀರಿಕೊಳ್ಳುತ್ತದೆ ಹಾಗಾಗಿ ಇದು ನಮ್ಮ ದೇಹದ ಸಕ್ಕರೆ ಮಟ್ಟವನ್ನು ಅತಿ ವೇಗವಾಗಿ ಹೆಚ್ಚಿಸುತ್ತದೆ. ನಮ್ಮ ಕಾಫಿ, ಟೀ ಹಾಗೂ ಹಲವಾರು ತಿನಿಸುಗಳಲ್ಲಿ ಸಕ್ಕರೆಯ ಬದಲಿಗೆ ಬೆಲ್ಲವನ್ನು ಉಪಯೋಗಿಸಿದರೆ ನಮ್ಮ ಆರೋಗ್ಯಕ್ಕೆ ಅದು ಬಹಳ ಒಳ್ಳೆಯದು.

– ತನ್ವಿ . ಬಿ.

LEAVE A REPLY

Please enter your comment!
Please enter your name here