ಸಭೆಯಲ್ಲಿ ಪತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ

0

ನಮ್ಮ ಕ್ಷೇತ್ರದ ನಿರ್ವಣೆಗೆ 10ಲಕ್ಷನ , ನಾವೇ ಕೊಟ್ಕಳ್ತೀವಿ ಬಿಡಿ , ನಿರ್ವಹಣೆ ಹಣಕ್ಕೆ ರೀ ಸ್ವಾಮಿ ನಿಮ್ಮ ಬಳಿ ಬಿಕ್ಷೆ ಬೇಡಬೇಕಾ..? ಎಂದು ಶಾಸಕ H.D.ರೇವಣ್ಣ ತಮ್ಮ ಕೈಯಲ್ಲಿದ್ದ ಮಾಹಿತಿ ಪತ್ರವನ್ನು ಸಚಿವರೆದುರೇ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ !!

ಹಾಸನ ಜಿ.ಪ.ಸಭಾಂಗಣದಲ್ಲಿ ಕೋಲಾಹಲ !! ಕೋವಿಡ್ ಸ್ಥಿತಿಗತಿ ಬಗ್ಗೆ ಸಭೆ ಕರೆದಿದ್ದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ , ಜಿಲ್ಲಾ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ , ಸಂಸದ ಪ್ರಜ್ವಲ್ ರೇವಣ್ಣ , ಜಿಲ್ಲಾಧಿಕಾರಿ ಮುಂದೆ ನನ್ನ ಕ್ಷೇತ್ರ ಕ್ಕೆ ಇಷ್ಟು ಕಡಿಮೆ ಅನುದಾನ ಕೊಟ್ಟರೆ ಎಲ್ಲಿಂದ ಸುಧಾರಣೆ ತರೋದಕ್ಕೆ ಸಾದ್ಯ ಎಂದು ಪತ್ರ (ಸಭೆಯ ಮಾಹಿತಿ ಪತ್ರ) ವನ್ನು ಸ್ಥಳ ದಲ್ಲೆ ಹರಿದ ಶಾಸಕ H.D.ರೇವಣ್ಣ

” ನನ್ನ ಜನ ಜಿಲ್ಲೆಯಲ್ಲಿ ಸಾಯ್ತವ್ರೇ ಅಲ್ಲಿ. ಅವರಿಗೆ ಏನ್ ಅಂತ ಉತ್ತರ ಕೊಡಬೇಕು. ನಿಮ್ಮ ಡಿಸಿ ಬಳಿ ಸರ್ಕಾರದ ಹಣವನ್ನು ಇಟ್ಟುಕೊಂಡು ದಿನಾ ಪೂಜೆ ಮಾಡ್ಕಳಕ್ಕೇಳಿ , ” – H.D.ರೇವಣ್ಣ

• ಸಭೆಯ ಮಧ್ಯೆ ಸ್ಥಳದಿಂದ ಹೊರಡಲು ಸಿದ್ದರಾಗಿದ್ದ ರೇವಣ್ಣ ಅವರನ್ನು ತಡೆದು‌ , ಸಭೆಯಲ್ಲಿ ಕೂರುವಂತೆ ಮನವಿ ಮಾಡಿದ ಸ್ಥಳೀಯ ಶಾಸಕ‌ ಪ್ರೀತಮ್ ಜೆ ಗೌಡ !! ನಂತರ ಸಭೆ ಮುಂದುವರೆಯಿತು

ಸಭೆಯಲ್ಲಿ : ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ , ಸಕಲೇಶಪುರ ಶಾಸಕ H.K.ಕುಮಾರಸ್ವಾಮಿ , ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ , ಶ್ರವಣಬೆಳಗೊಳ ಶಾಸಕ‌C.N ಬಾಲಕೃಷ್ಣ ಹಾಜರಿದ್ದರು

LEAVE A REPLY

Please enter your comment!
Please enter your name here