ಸಿಇಟಿ-2021 ಪರೀಕ್ಷೆ ಮುಂದೂಡಿಕೆ

0

ಸಿಇಟಿ-2021 – ಪರೀಕ್ಷೆ ಮುಂದೂಡಲಾಗಿದೆ. ಈ ಪರಿಷ್ಕರಿಸಿದ ದಿನಾಂಕಗಳು
2021ನೇ ಸಾಲಿನ ವಾರ್ಷಿಕ ದ್ವಿತೀಯ ಪಿಯು ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದರಿಂದ ಹಾಗು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಪರಿಗಣಿಸಿ, ದಿನಾಂಕ 07-07-2021 ಮತ್ತು 08-07-2021 ರಂದು ನಡೆಸಲು ನಿಗದಿಪಡಿಸಿದ್ದ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮತ್ತು 09-07-2021 ರಂದು ನಡೆಸಬೇಕಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ.

ಪ್ರಸ್ತುತ ಸಿಇಟಿ-2021 ಅನ್ನು ದಿನಾಂಕ 28-08-2021 ಮತ್ತು 29-08-2021 ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 30-08-2021 ರಂದು ನಡೆಸಲಾಗುವುದು ಹಾಗು ಸದ್ಯದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು.

ನವೀಕರಿಸಿದ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಆಗಿಂದಾಗ್ಗೆ ಭೇಟಿ ನೀಡುತ್ತಿರುವುದು ಅವಶ್ಯವಾಗಿದೆ.

LEAVE A REPLY

Please enter your comment!
Please enter your name here