ಹಾಸನ ಜಿಲ್ಲಾಡಳಿತ ವತಿಯಿಂದ ನೀಡುವ 2020ನೇ ಸಾಲಿನ *ಹಾಸನ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಶ್ರೀಮತಿ ಪೂಜಾ ರಘುನಂದನ್ ರವರಿಗೆ ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಪರಿಗಣಿಸಲಾಗಿದೆ.*
ಈ ಪ್ರಶಸ್ತಿಯನ್ನು ನವೆಂಬರ್ ಒಂದನೇ ತಾರೀಕು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾಗುವುದು.
ಶ್ರೀಮತಿ ಪೂಜಾ ರಘುನಂದನ್ ಅವರು ಕಳೆದ ಒಂದು ದಶಕದಿಂದ ರಂಗಭೂಮಿ ಚಟುವಟಿಕೆಗಳಲ್ಲಿ ನಿರತರಾಗಿದ್ದು ಅನೇಕ ಸಾಮಾಜಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ .
ಅಭಿನಯದ ಜೊತೆಗೆ ರಂಗ ಸಂಘಟನೆ ಹಾಗೂ ಸಮಾಜ ಸೇವೆಯಲ್ಲಿಯೂ ಸಹ ನಿರತರಾಗಿದ್ದು ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳದ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ .
ಹಾಸನ್ ನ್ಯೂಸ್ ನ ವಿಶೇಷ ಕಾರ್ಯಕ್ರಮಗಳಿಗೆ ನಿರೂಪಣೆಯನ್ನೂ ಸಹ ಪೂಜಾ ರಘುನಂದನ್ ಅವರು ಮಾಡಿರುತ್ತಾರೆ.
*pr special* ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಸಾಮಾಜಿಕ ಸಾಂಸ್ಕೃತಿಕ ವೈವಿಧ್ಯಮಯ ವಿಚಾರಗಳನ್ನು ರಾಜ್ಯದಾದ್ಯಂತ ಮುಟ್ಟಿಸುತ್ತಿದ್ದಾರೆ .