ಹುಣಿಸೆ ಹಣ್ಣಿನ ಪ್ರಯೋಜನಗಳು

0

ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಮುಖದ ಮೇಲೆ, ದೇಹದ ಮೇಲೆ,ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಅದಕ್ಕಾಗಿ ನಾವು ಸೇವಿಸುವ ಪದಾರ್ಥದ ಮೇಲೆ ನಮಗೆ ಎಚ್ಚರವಿರಬೇಕು ಹಾಗೂ ಆರೋಗ್ಯವಾದ ಪದಾರ್ಥಗಳನ್ನು ಸೇವಿಸಲು ಪ್ರಯತ್ನಿಸಬೇಕು.

ಹುಣಿಸೆ ಹಣ್ಣು ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಕಾರಿ.ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ನಮಗೆ ಒಳ್ಳೆಯ ಆರೋಗ್ಯ ಸ್ಥಿತಿಯನ್ನು ನೀಡಲು ಸಹಾಯ ಮಾಡುತ್ತದೆ.

ಹುಣಿಸೆ ಹಣ್ಣು ನೋಡಲು ಸ್ವಲ್ಪ ಒರಟಾದರೂ ಇದು ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ.ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ,ವಿಟಮಿನ್ ಇ, ಕ್ಯಾಲ್ಸಿಯಂ ಪೊಟ್ಯಾಶಿಯಂ, ಫಾಸ್ಪರಸ್, ಕಬ್ಬಿಣಾಂಶ ಮ್ಯಾಂಗನೀಸ್ ಮತ್ತು ನಾರಿನಾಂಶಗಳಿವೆ.ಹಾಗೂ ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ನಮ್ಮ ದೇಹದ ಹಲವಾರು ಸೋಂಕನ್ನು ತಡೆಗಟ್ಟುತ್ತದೆ.

ಹುಣಿಸೆಯನ್ನು ಅಡುಗೆಗೆ ಬಹಳ ರುಚಿಯನ್ನು ನೀಡುತ್ತದೆ. ಪ್ರಾಚೀನ ಕಾಲದಿಂದಲೂ ಹುಣಿಸೆಹಣ್ಣನ್ನು ಔಷಧಿಯ ರೀತಿಯಲ್ಲಿ ಉಪಯೋಗಿಸಲಾಗಿದೆ.

ಪ್ರಯೋಜನಗಳು:


• ಹುಣಿಸೆಹಣ್ಣು ನಮ್ಮ ಜೀರ್ಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವ ರೀತಿ ನೋಡಿಕೊಳ್ಳುತ್ತದೆ.ಗ್ಯಾಸ್ಟ್ರಿಕ್ ತೊಂದರೆ ಇರುವವರು ಹುಣಿಸೆ ಹಣ್ಣು ಸೇವನೆಯಿಂದ ತಮ್ಮ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದು.
• ನಮ್ಮ ಈಗಿನ ಜೀವನ ಶೈಲಿಯಿಂದ ಹಲವರು ದೇಹದ ತೂಕದ ಸಮಸ್ಯೆಯಿಂದ ತೊಂದರೆ ಪಡುತ್ತಿದ್ದಾರೆ ಅವರಿಗೆ ಹುಣಿಸೆಹಣ್ಣು ಬಹಳ ಸಹಾಯಕಾರಿ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಹುಣಿಸೆಹಣ್ಣನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಿ.

-ತನ್ವಿ .ಬಿ

LEAVE A REPLY

Please enter your comment!
Please enter your name here