ಕೋವಿಡ್ -19 ಜನವರಿ ಮಾಹೆಯಲ್ಲಿ 2ನೇ ಹಂತದಲ್ಲಿ ಹರಡುವ ಸಾಧ್ಯತೆಗಳಿದ್ದು ಜನರು ಜಾಗೃತಿವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ
ರೆಡ್ ಕ್ರಾಸ್ ಭವನದಲ್ಲಿಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಸರ್ವ ಸದ್ಯಸರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಪ್ರಸ್ತುತ ಮದುವೆ ಸಮಾರಂಭಗಳು ಹೆಚ್ಚು ನಡೆಯುತ್ತಿವೆ ಕೋವಿಡ್-19 ತಡೆಗಟ್ಟಲು ವಿಶೇಷವಾದ ಜಾಗೃತಿ ಕಾರ್ಯಕ್ರಮವನ್ನು ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ರಕ್ತ ದಾನ ಮಾಡಲು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ತುರ್ತು ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವವರ ಸಹಾಯಕ್ಕೆ ನೆರವಾಗಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿ ಅಧ್ಯಕ್ಷರಾದ ಹೆಚ್. ಪಿ ಮೋಹನ್ ಅವರು ಮಾತನಾಡಿ ಸಂಸ್ಥೆಯು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಲು ರೆಡ್ ಕ್ರಾಸ್ ನ ಎಲ್ಲಾ ಸದಸ್ಯರ ಸಲಹೆ ಸೂಚನೆಗಳಿಂದ ಕೋವಿಡ್ -19 ಸಂದರ್ಭದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ನಿರಾಶ್ರಿತರಿಗೆ ಸಹಾಯ ಮಾಡುವಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪಾತ್ರ ಹೆಚ್ಚಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಡಾ|| ಗುರುರಾಜ ಹೆಬ್ಬಾರ್ , ಕಾರ್ಯದರ್ಶಿ ಅನುಗಾನಾಳು ಕೃಷ್ಣಮೂರ್ತಿ ಡಾ|| ಎ ಸಾವಿತ್ರಿ , ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಜರಿದ್ದರು.