ಗ್ರಾಮದ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಘಾಟಿ ಚಿರತೆ ಕೊನೆಗೂ ಸೆರೆ

0

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮದ ಕಾಲೋನಿ ಹತ್ತಿರದಲ್ಲಿ ಕೆಲವು ದಿನಗಳ ಹಿಂದೆ ಕರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದಾಗಲೇ ಮಾಹಿತಿ ನೀಡಿದ್ದರು.

ಅದರ ಚಲನವಲನ ಗಮನಿಸಿದ ಅರಣ್ಯ ಅಧಿಕಾರಿಗಳು ಕೆಲವು ಜಾಗಗಳನ್ನು ಪರಿಶೀಲಿಸಿ ಸೂಕ್ಷ್ಮ ಪ್ರದೇಶದಲ್ಲಿ ಬೋನ್ ಇಡಲಾಗಿದ ಪ್ರತಿದಿನ ಅರಣ್ಯ ಅಧಿಕಾರಿಗಳು ಬೋನನ್ನು ಗಮನಿಸುತ್ತಿದ್ದರು ಅಂತೆಯೇ ನಿನ್ನೆ ರಾತ್ರಿ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಈ ಅಧಿಕೃತ ಮಾಹಿಯಿ ವಿಡಿಯೋ ಸಹಿತ, ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಬೋನನ್ನು ಜಾಜೂರು ಗ್ರಾಮದ ಅರಣ್ಯ ನರ್ಸರಿಯಲ್ಲಿ ತೆಗೆದುಕೊಂಡು ಬಂದು ಚಿರತೆಯನ್ನು ಆರೈಕೆ ಮಾಡಿ ವೈದ್ಯರಿಂದ ತಪಾಸಣೆ ಮಾಡಿ ನಂತರ ಮೇಲಾಧಿಕಾರಿಗಳ ಸಲಹೆಯಂತೆ ದಟ್ಟ ಕಾಡಿಗೆ ಬಿಡಲಾಗುವುದೆಂದು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here