ಖರ್ಜೂರ ಅರಬ್ ದೇಶದ ಹಣ್ಣು.ಬಿಸಿಲಿಗೆ ಬೆಂದು ಮಾನವನಿಗೆ ಆರೋಗ್ಯಕರ ಅಂಶವನ್ನು ನೀಡುವ ಆಹಾರವಿದು.ಇದು ಬಹಳ ರುಚಿಕರ ಹಾಗೂ ಆರೋಗ್ಯಕರ.
ಖರ್ಜೂರದಲ್ಲಿರುವ ಪ್ರೋಟೀನ್, ವಿಟಮಿನ್ ಬಿ ಹಾಗೂ ಕಬ್ಬಿಣಾಂಶ ಇದನ್ನು ಹೆಚ್ಚು ಪ್ರಾಯೋಜಕರವಾಗಿ ಮಾಡುತ್ತದೆ.
ಪ್ರಯೋಜನಗಳು:
• ಜೀರ್ಣಕ್ರಿಯೆ ಸಮಸ್ಯೆಗಳನ್ನು ಸರಿಪಡಿಸುತ್ತದೆ:
ಆ್ಯಂಟಿ ಆಕ್ಸಿಡೆಂಟ್ಸ್ ನಮ್ಮ ದೇಹಕ್ಕೆ ಬಹಳ ಮುಖ್ಯ ಒಣ ಖರ್ಜೂರದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ನಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ ಹಾಗೂ ನಮ್ಮ ಜೀರ್ಣಕ್ರಿಯೆ ಸುಲಭವಾಗಿ ಕೆಲಸ ಮಾಡುವುದಕ್ಕೆ ಸಹಾಯ ಮಾಡುತ್ತದೆ.
• ಮೂಲೆಗಳನ್ನು ಶಕ್ತಿಗೊಳಿಸುತ್ತದೆ:
ಮೂಳೆಗಳಿಗೆ ಕ್ಯಾಲ್ಶಿಯಂ ಅಂಶ ಬಹಳ ಮುಖ್ಯ ಖರ್ಜೂರದಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳು ಹಾಗೂ ಹಲ್ಲುಗಳನ್ನು ಗಟ್ಟಿಮುಟ್ಟಾಗಿ ಮಾಡುತ್ತದೆ. ಹಲ್ಲಿನ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಅಥವಾ ಮೂಳೆಗಳು ದುರ್ಬಲಗೊಂಡರೆ ಒಣ ಖರ್ಜೂರವನ್ನು ಸೇವಿಸುವುದು ಬಹಳ ಉತ್ತಮ.
• ಚರ್ಮಕ್ಕೆ ಹೊಳಪು ನೀಡುತ್ತದೆ:
ಚರ್ಮದ ಹೊಳಪಿಗೆ ಕಾಂತಿಗೆ ವಿಟಮಿನ್ ಗಳು ಮೂಲ ಕಾರಣ ಒಣ ಖರ್ಜೂರದಲ್ಲಿ ವಿಟಮಿನ್ ಬಿ ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿ ಮಾಡುತ್ತದೆ
ಹಾಗೂ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ದಿನಕ್ಕೆ ಒಂದೆರೆಡು ಖರ್ಜೂರವನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸಿ.
-ತನ್ವಿ. ಬಿ