ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ಚಿರತೆ ಮನೆಯ ಮುಂದೆ ಆಗಮಿಸಿ ವಾಪಸ್ ಆಗಿದೆ. ತಾಲೂಕಿನ ಮಾಯಗೊಂಡನಹಳ್ಳಿ ಗ್ರಾಮದ ಜಗದೀಶ್ ಎಂಬುವರ ಮನೆಯ ಮುಂದೆ ಚಿರತೆ ನಾಯಿಯನ್ನ ಹೊತ್ತೊಯ್ದಲು ಬಂದು ನಂತರ ಬೇಟೆ ಸಿಗದೇ ವಾಪಸ್ ಆಗಿದೆ.
ಇನ್ನು ಗ್ರಾಮಕ್ಕೆ ಚಿರತೆ ಬಂದಿರುವುದಕ್ಕೆ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈಗಾಗ್ಲೇ ಸಾಕಷ್ಟು ಬಾರಿ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು ಅರಣ್ಯ ಅಧಿಕಾರಿಗಳು ಚಿರತೆ ಹಿಡಿಯಲು ಮುಂದಾಗುತ್ತಿಲ್ಲ. ಕೂಡಲೇ ಈ ಪ್ರಕರಣದಿಂದಲಾದರೂ ಎಚ್ಚೆತ್ತು ಅರಣ್ಯಾಧಿಕಾರಿಗಳು ಚಿರತೆ ಬೋನು ಇಟ್ಟು ಅದನ್ನ ಕೂಡಲೇ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ