ಗೊರೂರು: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡಲು ತೆರಳಿದ್ದ ವೈದ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣ ನಡೆದಿದೆ. ಅರಕಲಗೂಡಿನ ಹೌಸಿಂಗ್ ಬೋರ್ಡ್ ನಲ್ಲಿ ವಾಸವಿದ್ದ ಡಾ. ಚಂದ್ರಶೇಖರ್ (31) ಮೃತ ವೈದ್ಯ ರಾಗಿದ್ದು, ಇವರು ಹೊಳೆನರಸೀಪುರ ತಾಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೆ.14 ರಂದು ಬೆಳಿಗ್ಗೆ ಸುಮಾರು 10 ಗಂಟೆಯಲ್ಲಿ ಮನೆಯಿಂದ ಗೊರೂರು ಪಕ್ಕದ ಹೇಮಾವತಿ ಹಿನ್ನಿರಿನ ಕೋನಪುರ ಬೆಟ್ಟದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದರು ನಂತರ ಸಂಜೆ 5:00 ಗಂಟೆ ಯಾದರೂ ಮನೆಗೆ ಬರದಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಪರಿಶೀಲಿ ಸಿದಾಗ ಕೋನಪು ರದ ಬಳಿ ಕಾರು ಪತ್ತೆಯಾಗಿದೆ.
ಹೊಳೆ ಬದಿಯಲ್ಲಿ ನೋಡಿದಾಗ ಅವರ ಬಟ್ಟೆಗಳು ಸಿಕ್ಕಿದ್ದು ಮರುದಿನ ಚಂದ್ರಶೇಖರ್ ಅವರ ಮೃತ ದೇಹ ಹೊಳೆಯಲ್ಲಿ ತೇಲುತ್ತಿ ರುವುದು ಕಂಡುಬಂದಿದ್ದು ಗೊರೂರು ಪೊಲೀಸರು ಪರಿಶೀಲನೆ ನಡೆಸಿ ಅರಕಲ ಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಒಳಪಡಿಸಿದ್ದು ಆಕಸ್ಮಿಕ ಸಾವಿನ ದೂರನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.