ಎಲ್ಲಾ ಒಗ್ಗರಣೆಯಲ್ಲಿ ಜೀರಿಗೆ ಒಂದು ಮುಖ್ಯ ಅಂಶ.
ಇದು ನಮ್ಮ ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ ಎಂದು ಹಲವರಿಗೆ ತಿಳಿದಿದೆ. ನಾವು ರೆಸ್ಟೋರೆಂಟ್ಗಳಲ್ಲಿ ಊಟ ಸೇವಿಸಿದ ಬಳಿಕ ಇದನ್ನು ನೀಡುತ್ತಾರೆ ನಿಮಗೆಲ್ಲರಿಗೂ ಇದು ತಿಳಿದಿದೆ ಆದರೆ ಜೀರಿಗೆಯ ಇತರ ಉಪಯೋಗಗಳು ನಿಮಗೆ ತಿಳಿದಿದ್ದೀಯಾ?
ಜೀರಿಗೆ ಪ್ರಯೋಜನಗಳು
• ಮಧುಮೇಹ ಸಮಸ್ಯೆಗೆ ಪರಿಹಾರ:
ಮಧುಮೇಹ ಸಮಸ್ಯೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವವರು ಜೀರಿಗೆಯನ್ನು ಸೇವಿಸಿದರೆ ಇದು ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
• ಅಸ್ತಮಾ ರೋಗಿಗಳಿಗೆ ಸಹಾಯಕಾರಿ:
ಜೀರಿಗೆಗೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಾಮರ್ಥ್ಯವಿದೆ ಹಾಗಾಗಿ ಇದು ಉಸಿರಾಟ ಸಮಸ್ಯೆಯನ್ನು ಪರಿಹಾರ ಮಾಡಲು ಬಹಳ ಉಪಯೋಗಕಾರಿ ಇದು ಅಸ್ತಮಾ ರೋಗಿಗಳಿಗೆ ಉಸಿರಾಟ ವ್ಯವಸ್ಥೆಯನ್ನು ನಿಯಂತ್ರಿಸಿ ಅಸ್ತಮಾ ರೋಗವನ್ನು ತಡೆಯುವಂತೆ ಮಾಡುತ್ತದೆ.
• ತೂಕ ಇಳಿಸಲು ಲಾಭಕಾರಿ:
ಪ್ರಯತ್ನಪಟ್ಟರೂ ನಿಮ್ಮ ತೂಕ ಇಳಿಸಲು ಬಹಳ ತೊಂದರೆಯಾಗುತ್ತಿದ್ದರೆ ಖಾಲಿಹೊಟ್ಟೆಯಲ್ಲಿ ಜಿರಾ ನೀರು ಕುಡಿದರೆ , ತೂಕ ಇಳಿಸಲು ಬಹಳ ಸಹಾಯಕಾರಿಯಾಗುತ್ತದೆ. ಜೀರಿಗೆಗೆ ರೋಗನಿರೋಧಕ ಶಕ್ತಿ ಹೆಚ್ಚು ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆಯುತ್ತದೆ ಆದ್ದರಿಂದ ನಮಗೆ ಯಾವುದೇ ರೋಗಗಳು ಬರುವುದಿಲ್ಲ.
ಹಲವಾರು ವೈದ್ಯರು ಬೆಳಗಿನಜಾವ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಸೂಚಿಸಿದ್ದಾರೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀರಿಗೆಯನ್ನು ಬಳಸಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
ತನ್ವಿ. ಬಿ