ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಕೋಕಂ ಬಗ್ಗೆ ತಿಳಿದಿದ್ದೀರಾ? ಇದು ಒಂದು ಅಪರೂಪದ ಹಣ್ಣು ಇದರ ಶರಬತ್ತು ಬಹಳ ಫೇಮಸ್ಸು. ಇದರಲ್ಲಿರುವ ಪೊಟಾಶಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್ ,ವಿಟಮಿನ್ ಸಿ, ಬಿ ಖನಿಜಗಳು ಇದನ್ನು ಹೆಚ್ಚು ಉಪಯೋಗಕಾರಿ ಯಾಕೆ ಮಾಡಿದೆ. ಆದರೆ ಕೋಕಂ ಹಣ್ಣಿನ ಜ್ಯೂಸ್ ಉಪಯೋಗಗಳು ಇವತ್ತಿನ ವಿಚಾರ.
ಕೋಕಂ ಶರಬತ್ತಿನ ಪ್ರಯೋಜನಗಳು
• ಜೀರ್ಣಕ್ರಿಯೆಗೆ ಸಹಾಯಕಾರಿ:
ಜೀರ್ಣಕ್ರಿಯೆಯಲ್ಲಿ ತೊಂದರೆಯಾದಾಗ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಹಾಗಾಗಿ ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲತೆಯಿಂದ ತೊಂದರೆಯಾದರೆ ಕೋಕಂ ಶರಬತ್ತು ಸೇವಿಸಿ ಇದು ಜೀರ್ಣಕ್ರಿಯೆಯನ್ನು ಬಹಳ ಸುಲಭವಾಗಿ ಮಾಡುತ್ತದೆ.
• ಕ್ಯಾನ್ಸರ್ ವಿರುದ್ಧ ಹೋರಾಡಲು ಉಪಯೋಗಕಾರಿ:
ಕೋಕಂನಲ್ಲಿರುವ ಗಾರ್ಸಿನೊಲ್ ಅಂಶ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಬಹಳ ಸಹಾಯಕಾರಿ ಇದು ಕ್ಯಾನ್ಸರ್ ವಿರುದ್ಧ ಹೋರಾಡಿ ಗುಣಮುಖರಾಗುವಂತೆ ಮಾಡುತ್ತದೆ.
• ತೂಕ ಇಳಿಸಲು ಲಾಭಕಾರಿ:
ಈಗಿನ ಆಹಾರ ಪದ್ಧತಿಗಳು ನಮ್ಮ ದೇಹದ ಆರೋಗ್ಯವನ್ನು ಬಹಳ ಹಾಳುಮಾಡುತ್ತಿದೆ. ಹಲವರು ತೂಕ ಇಳಿಸಲು ಪ್ರಯತ್ನಿಸುತ್ತಿರುತ್ತಾರೆ. ಎಲ್ಲರಿಗೂ ಕೋಕಂ ಶರಬತ್ ಸಹಾಯಕಾರಿ. ಕೋಕಂ ದೇಹದ ಕೊಬ್ಬಿನಂಶವನ್ನು ಕರಗಿಸುತ್ತದೆ ಹಾಗಾಗಿ ದೇಹದ ತೂಕ ಇಳಿಸಲು ಕೋಕಂ ಶರಬತ್ ಕುಡಿಯುವುದರಿಂದ ಬಹಳ ಸುಲಭ.
• ಚರ್ಮದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ:
ಕೋಕಂನಲ್ಲಿರುವ ವಿಟಮಿನ್-ಸಿ ಚರ್ಮಕ್ಕೆ ಹೊಳಪು ನೀಡುತ್ತದೆ. ಯಾವುದೇ ಸುಕ್ಕುಗಳು, ಮೊಡವೆಗಳು ಬಾರದಂತೆ ನೋಡಿಕೊಳ್ಳುತ್ತದೆ. ತ್ವಚೆಯನ್ನು ಮೃದು ಮಾಡಿ ಒಳ್ಳೆ ಹೊಳಪು ನೀಡುತ್ತದೆ.
ಕೋಕಂನಲ್ಲಿ ಹೆಚ್ಚು ಖನಿಜಾಂಶಗಳಿವೆ ಹಾಗಾಗಿ ಇದು ಅಲರ್ಜಿಗಳನ್ನು ಕೂಡ ತಡೆಯುತ್ತದೆ ಹಾಗಾಗಿ ದೇಹವನ್ನು ತಂಪು ಮಾಡುವ ಕೋಕಂ ಜ್ಯೂಸ್ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
- ತನ್ವಿ. ಬಿ