ಹಾಸನ : 2021-22 ನೇ ಸಾಲಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಯೋಜನೆಯಡಿ ಗ್ರಾಮೀಣ/ನಗರ/ಪ್ರದೇಶದ 18 ವರ್ಷಗಳ ಮೇಲ್ಪಟ್ಟ (ಎಸ್.ಸಿ, ಎಸ್,ಟಿ, ಓ.ಬಿ.ಸಿ, ಅಲ್ಪಸಂಖ್ಯಾತ ಇತರೆ) ಪುರುಷ/ಮಹಿಳಾ ಅಭ್ಯರ್ಥಿಗಳು ಹೊಸದಾಗಿ ಕೈಗಾರಿಕೆ / ಸೇವಾ ಉದ್ಯಮಗಳನ್ನು ಪ್ರಾರಂಭಿಸುವ ಸಂಬಂಧ ಅರ್ಜಿಗಳನ್ನು ಸಲ್ಲಿಸಬಹುದು.
ಉತ್ಪಾದನಾ ವಲಯಕ್ಕೆ 25 ಲಕ್ಷ ರೂಗಳು ಹಾಗೂ ಸೇವಾ ವಲಯಕ್ಕೆ 10 ಲಕ್ಷ ರೂಗಳ ವರೆಗೆ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಗಳು https://kviconline. gov.in/pmegpeportal ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಡೈರಿ ಸರ್ಕಲ್ ಹತ್ತಿರ ಬಿ.ಎಂ ರಸ್ತೆ ಹಾಸನದ ಆಡಳಿತ ಕಚೇರಿಯಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.
Hollow brick factory