ಜಿಲ್ಲೆಯಲ್ಲಿ 5g ಸೇವೆ ನೀಡಲಿರುವ ಮೊದಲ ನೆಟ್ವರ್ಕ್ ಜಿಯೋ ಆಗಲಿದೆ

0

ನವದೆಹಲಿ/ಹಾಸನ : ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಮಂಗಳ ವಾರದಿಂದ 5ಜಿ ಸೇವೆಗಳನ್ನು ಆರಂಭಿಸಲಾ ಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ. , ಹೊಸದಾಗಿ

ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ ಎಂದು ಕಂಪನಿ ಹೇಳಿದ್ದು . , ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಡ, ಗೋವಾ, ಹರಿಯಾಣ, ಜಾರ್ಖಂಡ್, ಪುದುಚೇರಿ ಮತ್ತು ಕೇರಳದಲ್ಲಿ 5ಜಿ ಸೇವೆ ವಿಸ್ತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ 17 ರಾಜ್ಯಗಳು ಸೇರಿದಂತೆ

ಕೇಂದ್ರಾಡಳಿತ ಪ್ರದೇಶಗಳ 184 ನಗರಗಳಲ್ಲಿ ಗ್ರಾಹಕರಿಗೆ 5ಜಿ ಸೇವೆ ಅದಾಗಲೇ ಲಭ್ಯವಾಗಿದೆ. , ಇಂದಿನಿಂದ ಪ್ರಾರಂಭವಾಗುವ 5ಜಿ ಸೇವೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಜತೆಗೆ ಗ್ರಾಹಕರು ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ.

ಆಂಧ್ರ ಪ್ರದೇಶದ ಚಿತ್ತೂರು, ಓಂಗೋಲ್, ಕಡಪ, ಅಸ್ಸಾಂನ ನಾಗಾನ್, ಛತ್ತೀಸ್‌ಗಢದ ಬಿಲಾಸ್ಪುರ್, ಕೊರ್ಬಾ, ಗೋವಾದ ಪಣಜಿ, ಹರಿಯಾಣದ ಅಂಬಾಲಾ, ಹಿಸಾರ್, ಕರ್ನಾಲ್, ಪಾಣಿಪತ್, ರೋಹಕ್, ಕರ್ನಾಟಕದ ಹಾಸನ, ಮಂಡ್ಯ ಜಿಲ್ಲೆಯ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ , ಈ ಮೂಲಕ 5G ಸೇವೆ ನೀಡುವಲ್ಲಿ ಹಾಸನ ಜಿಲ್ಲೆಯಲ್ಲಿ ಜಿಯೋ ಮೊದಲ ನೆಟ್ವರ್ಕ್ ಆಗಿಲಿದೆ

LEAVE A REPLY

Please enter your comment!
Please enter your name here