ಹಾಸನ: ಮನೆಯಲ್ಲಿ ಯಾರೂ ಇಲ್ಲದಿರುವ ವೇಳೆ ನೋಡಿ ಒಳನುಗ್ಗಿರುವ ಕಳ್ಳರು, ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ.
ಕಳ್ಳತನ ನಡೆದ ಸಮಯದಲ್ಲಿ ಗ್ರಾನೈಟ್ ಉದ್ಯಮಿ ರಘು ಕುಟುಂಬಸ್ಥರು ಹಬ್ಬಕ್ಕೆ ಬಟ್ಟೆ ತರಲು ತೆರಳಿದ್ದರು ಎಂದು ತಿಳಿದುಬಂದಿದೆ. ಯಾರೂ ಇಲ್ಲದಿರುವ ಸಮಯಕ್ಕೆಂದೇ ಹೊಂಚು ಹಾಕುತ್ತಿದ್ದ ಕಳ್ಳರು ಮನೆ ಬಾಗಿಲನ್ನೇ ಮುರಿದು ದುಷ್ಕೃತ್ಯ ನಡೆಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬೇಲೂರು ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಾಸನ ಎಸ್ಪಿ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹಾಸನದ ಗ್ರಾನೈಟ್ ಉದ್ಯಮಿಯ ಮನೆ ಬಾಗಿಲು ಮುರಿದು 3 ಕೆಜಿ ಚಿನ್ನ, 24 ಲಕ್ಷ ರೂಪಾಯಿ ಹಣ ಕಳವು ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ
ಕಳ್ಳತನ ನಡೆದ ಸಮಯದಲ್ಲಿ ಗ್ರಾನೈಟ್ ಉದ್ಯಮಿ ರಘು ಕುಟುಂಬಸ್ಥರು ಹಬ್ಬಕ್ಕೆ ಬಟ್ಟೆ ತರಲು ತೆರಳಿದ್ದರು ಎಂದು ತಿಳಿದುಬಂದಿದೆ. ಯಾರೂ ಇಲ್ಲದಿರುವ ಸಮಯಕ್ಕೆಂದೇ ಹೊಂಚು ಹಾಕುತ್ತಿದ್ದ ಕಳ್ಳರು ಮನೆ ಬಾಗಿಲನ್ನೇ ಮುರಿದು ದುಷ್ಕೃತ್ಯ ನಡೆಸಿದ್ದಾರೆ.
ಹಹಾಸನದ ಬೇಲೂರು ರಿಂಗ್ ರಸ್ತೆಯಲ್ಲಿರುವ ಗ್ರಾನೈಟ್ ಉದ್ಯಮಿ ರಘು ಎಂಬುವವರ ಮನೆಗೆ ಕನ್ನ ಹಾಕಿದ ಖದೀಮರು ಬರೋಬ್ಬರಿ ಮೂರು ಕೆಜಿ ಚಿನ್ನ ಹಾಗೂ 24 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಎನ್ನಲಾಗಿದೆ.