ಹಾಸನ / ಅರಸೀಕೆರೆ / ಬೇಲೂರು / ಸಕಲೇಶಪುರ / ಹೊಳೆನರಸೀಪುರ :
ಸಮಸ್ತ ಹಾಸನ ಜನತೆಗೆ , ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟು ಹಬ್ಬದ ಶುಭಾಶಯ ಗಳು !,
• ಮಹಾತ್ಮ ಗಾಂಧೀಜಿ ಅವರು 1924 ಮತ್ತು 1934ರಲ್ಲಿ ಹಾಸನ ಜಿಲ್ಲೆಗೆ ಈ ಎರಡು ಬಾರಿ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅಸಹಕಾರ ಚಳವಳಿ ಬಗ್ಗೆ ಜನರಿಗೆ ಅರಿವು ಮೂಡಿಸಲು , ಭೇಟಿ ನೀಡಿದ್ದರು.
• ಮೊದಲ ಬಾರಿಗೆ ಅರಸೀಕೆರೆ ಹಾಸನ, ಬೇಲೂರು ಹಾಗೂ
• 2ನೇ ಬಾರಿಗೆ ಸಕಲೇಶಪುರ, ಹೊಳೆನರಸೀಪುರಕ್ಕೆ ಭೇಟಿ ನೀಡಿದ್ದ ವೇಳೆ ಜಿಲ್ಲೆಯ B.N.ಬೋರಣ್ಣಗೌಡ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಿ.ಆರ್. ಕರೀಗೌಡ, ಗುಂಡಪ್ಪ ಗೌಡ, ಯಶೋಧರಮ್ಮ ದಾಸಪ್ಪ, ಡಿ.ಎನ್.ರಾಮಸ್ವಾಮಿ ಅವರು ಗಾಂಧಿ ಜತೆ ನಿಕಟ ಸಂಪರ್ಕದಲ್ಲಿದ್ದ ನಮ್ಮವರಾಗಿದ್ದರು.
• ಹಾಸನ ನಗರದ ಕೇಂದ್ರ ಗ್ರಂಥಾಲಯ ಎಡಭಾಗದ ಆವರಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಭಾಷಣ ಮಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದರು.
• ಬಳಿಕ ವಾಣಿ ವಿಲಾಸ ಹಾಗೂ ಉತ್ತರ ಬಡಾವಣೆ ಶಾಲೆಗಳನ್ನು ವೀಕ್ಷಿಸಿದ ಸಂದರ್ಭ ಮೆಲುಕು ಹಾಕಬಹುದು
• ಹಾಸನ ಜಿಲ್ಲೆಯ ಐತಿಹಾಸಿಕ ಪ್ರದೇಶ ಬೇಲೂರಿನ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ : ಅಲ್ಲಿ ಅರ್ಧ ಗಂಟೆ ಮಂಗವೊಂದು ಯುವತಿ ಯೊಬ್ಬಳಿಗೆ ಕೀಟಲೆ ಮಾಡುತ್ತಿರುವ ಶಿಲ್ಪ ವನ್ನೇ ನೋಡುತ್ತ ನಿಂತಿದ್ದರಂತೆ . ದೇವಾಲಯ ವಾಸ್ತು ಶಿಲ್ಪ ಸೌಂದರ್ಯಕ್ಕೆ ಮನ ಸೋತ್ತಿದ್ದ ಗಾಂಧೀಜಿ ಇದನ್ನೆಲ್ಲ ವೀಕ್ಷಿಸಲು ಒಂದು ದಿನವಾದರೂ ಸಾಲುವುದಿಲ್ಲ. ಮತ್ತೊಮ್ಮೆ ಇತ್ತ ಬಂದಾಗ ದೇವಸ್ಥಾನ ವೀಕ್ಷಣೆಗೆ ಒಂದು ದಿನ ಮೀಸಲಿರಿಸುತ್ತೇನೆ ಎಂದಿದ್ದರಂತೆ
• ತುಮಕೂರಿನಲ್ಲಿ ಓದುತ್ತಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮಗ ರಾಮಚಂದ್ರ ಎಂಬುವವರು ಬ್ರಿಟಿಷರ ಗುಂಡಿಗೆ ಬಲಿಯಾದ. ಆಗ ಗಾಂಧೀಜಿ, ‘ನಿನ್ನ ಮಗ ದೇಶಕ್ಕಾಗಿ ಹುತಾತ್ಮನಾದ. ನೀನು ಹೋರಾಟ ಮುಂದುವರೆಸ ಬೇಕು’ ಎಂದು ರಾಮಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಅದೇ ರೀತಿ ಬೋರಣ್ಣ ಗೌಡ ಅವರಿಗೂ ‘ದೇಶಕ್ಕೆ ನಿನ್ನ ಸೇವೆ ಬೇಕಾಗಿದೆ. ಓದು ನಿಲ್ಲಿಸಿ ಚಳವಳಿಯಲ್ಲಿ ಭಾಗವಹಿಸಬೇಕು’ ಎಂದು ಪತ್ರ ಬರೆದಿದ್ದರಂತೆ
• ನಿಮಗೆ ಗೊತ್ತೇ ??
ದೆಹಲಿಯ ರಾಜ್ ಘಾಟ್ ಮಾದರಿಯಲ್ಲೇ ಮಹಾತ್ಮ ಗಾಂಧಿ ಚಿತಾಭಸ್ಮಾ ಸಮಾಧಿ ಅರಸೀಕೆರೆಯ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ಕಸ್ತೂರಬಾ ಶಿಬಿರ) ಆವರಣದಲ್ಲಿದೆ.
ಗಾಂಧಿ ಅನುಯಾಯಿಯಾಗಿದ್ದ ಮಾಜಿ ಸಚಿವೆ ದಿ.ಯಶೋಧರಮ್ಮ ದಾಸಪ್ಪ ಅವರ ಪ್ರಯತ್ನದ ಫಲವಾಗಿ ಕಸ್ತೂರಬಾ ಕೇಂದ್ರದಲ್ಲಿ 1948ರಲ್ಲಿ ಗಾಂಧೀಜಿ ಚಿತಾಭಸ್ಮದ ಸಮಾಧಿ ನಿರ್ಮಾಣಗೊಂಡಿದ್ದು . , ಅರಸೀಕೆರೆ ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಅರಸೀಕೆರೆ –ಮೈಸೂರು ರಸ್ತೆಯ ರೈಲ್ವೆ ಗೇಟ್ ಸಮೀಪ ಸ್ಮಾರಕ ಇದೆ. ದೆಹಲಿಯ ರಾಜ್‌ಘಾಟ್ ಬಿಟ್ಟರೆ ಗಾಂಧೀಜಿ ಚಿತಾಭಸ್ಮ ಇರುವುದು ಅರಸೀಕೆರೆಯಲ್ಲಿ ಮಾತ್ರ.
ಈ ಸ್ಥಳದ್ಲಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಳನ್ನು ಟ್ರಸ್ಟ್‌ನಿಂದ , ಹೊಲಿಗೆ, ಕಸೂತಿ ಮತ್ತಿತರ ತರಬೇತಿಗಳ ಮೂಲಕ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ತುಂಬಲಾಗುವ ಕೆಲಸ ವಾಗುತ್ತಿತ್ತು
ಹಲವಾರು ಧ್ಯೇಯೋದ್ದೇಶವುಳ್ಳ ಈ ಪ್ರವಾಸಿ ಸ್ಥಳಕ್ಕೆ ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ