ಹಾಸನ ಮಾ.03(ಹಾಸನ್_ನ್ಯೂಸ್ !, ಹೊಳೆನರಸೀಪುರ ಪುರಸಭೆ ಕಚೇರಿಯಲ್ಲಿಂದು ಭ್ರಷ್ಟಾಚಾರ ನಿಗ್ರಹದಳದಿಂದ ಸಾರ್ವಜನಿಕರಿಗೆ ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಅರಿವು ಮೂಡಿಸಲಾಯಿತು.
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ದ ಎ.ಸಿ.ಬಿ ಗೆ ದೂರನ್ನು ನೀಡಬಹುದಾಗಿದೆ ಹಾಗೂ ಸಂಬಂದಪಟ್ಟ ಅಧಿಕಾರಿಯ ವಿರುದ್ದ ಹಾಸನ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ಭೇಟಿ ಮಾಡಿ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದಾಗಿದೆ ಹಾಗೂ ಸರ್ಕಾರಿ ನೌಕರರು ತನ್ನ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೆ ಅಂತವರ ಬಗ್ಗೆ ಅಕ್ರಮ ಆಸ್ತಿಯ ಬಗ್ಗೆ ತಿಳಿಸಬಹುದು ಎಂದು ಜಾಗೃತಿಯನ್ನು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಾಸನ ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಕೃಷ್ಣಮೂರ್ತಿ. ಹೆಚ್. ಮತ್ತು ಪೊಲೀಸ್ ನಿರೀಕ್ಷಕರಾದ ಜಗದೀಶ್.ಕೆ. ಮತ್ತು ಬಿ.ಆರ್.ಗೌಡ ಹಾಜರಿದ್ದರು.