ಬೈಕ್ ಸವಾರ ಸಾವು

0

ಬೈಕ್ ಸವಾರ ಸಾವು

ಆಲೂರು: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ
ಮೃತಪಟ್ಟಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಗ್ರಾಮದ ಬಳಿ ಬುಧವಾರ ಮುಂಜಾನೆ ನಡೆದಿದೆ.
ಸಕಲೇಶಪುರ ತಾಲೂಕು ಕೊಲ್ಲಹಳ್ಳಿ ಗ್ರಾಮದ ಸುಬ್ರಹ್ಮಣ್ಯ(30)ಮೃತ.
ಮುಂಜಾನೆ 4.30 ರ ಸಮಯದಲ್ಲಿ ತಾವು ನಡೆಸುತ್ತಿದ್ದ ಚಿಲ್ಲರೆ ಅಂಗಡಿಗೆ ಸಾಮಾನು ತರಲು ಸಕಲೇಶಪುರದಿಂದ ಹಾಸನಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು.


ಪಾಳ್ಯ ಹೋಬಳಿ ಹೊನ್ನವಳ್ಳಿ ಹತ್ತಿರದ ಎನ್.ಹೆಚ್-75 ರಲ್ಲಿ ಹೋಗುತ್ತಿದ್ದಾಗ
ಹಾಸನದ ಕಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ.
ಬೈಕ್ ಸಮೇತ ರಸ್ತೆ ಮೇಲೆ ಬಿದ್ದ ಸುಬ್ರಹ್ಮಣ್ಯ ಅವರ ತಲೆ, ಕಾಲಿಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತಕ್ಕೆ ಬಸ್ ಚಾಲಕನ ಅಜಾಗತೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗಿದ್ದು, ಆಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here