ಅಪಘಾತ ಮಾಡಿ ಇಬ್ಬರ ಜೀವ ತೆಗೆದು ಪರಾರಿಯಾಗಿದ್ದ ಜೀಪನ್ನು ಸಿನಿಮೀಯ ರೀತಿ ಹಿಡಿದ ಹೊಳೆನರಸೀಪುರ ಪೊಲೀಸ್

0

ಹಾಸನ : ಅದು ಫೆ.11ರ ರಾತ್ರಿ ಕತ್ತಲು ಅದಾಗಲೇ ಕವಿದಿತ್ತು ಅಷ್ಟೇ , 7 ಗಂಟೆಯ ಆ ಸಮಯದಲ್ಲಿ ಅಪರಿಚಿತ ವಾಹನವೊಂದು , ದ್ವಿಚಕ್ರ ವಾಹನಕ್ಕೆ ಗುದ್ದಿ ಚಿಕ್ಕನಹಳ್ಳಿ ದೇವರಾಜು (47) ಹಾಗೂ ಕೃಷ್ಣ (45) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು . ಸ್ಥಳದಲ್ಲಿ ಮೃತರ ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿತ್ತು ., ಆದರೆ ಅಪಘಾತ ನಡೆದ ಆ ಸಮಯ ವಾಹನ ಪರಾರಿ ಆಗಿತ್ತು. ಪ್ರಕರಣ ಪತ್ತೆ ಹಚ್ಚಲು ಇನ್ಸ್ ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. , ಅದು ಅಷ್ಟು ಸುಲಭದ ಮಾತಾಗಿರಲಿಲ್ಲ ,‌ ಆದರೆ

ಬುದ್ಧಿಗೆ ಕೆಲಸ ಕೊಡಬೇಕಿತ್ತು ಅಂತೆಯೇ , ಅಪಘಾತ ಸ್ಥಳದಲ್ಲಿ ಮಹಿಂದ್ರಾ ಥಾರ್ ಎನ್ನುವ ವಾಹನದ ಬಿಡಿಭಾಗ ಮತ್ತು ಕೆಲವು ನಂಬರ್‌‌‌‌ ಪತ್ತೆಯಾಗಿದ್ದವು. ಇವುಗಳನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾಗ . ಆ ಸಮಯ ಹಾಸನ ಮೈಸೂರು ಮುಖ್ಯರಸ್ತೆಯಲ್ಲಿ ಸಂಚರಿಸಿದ್ದ ಬಹುತೇಕ ವಾಹನಗಳನ್ನು ಪರಿಶೀಲನೆ ನಡೆಯಿತು. ಆಗ ಸಿಸಿ ಕ್ಯಾಮರಾದಲ್ಲಿ ವಿಡಿಯೋ ನೋಡಿ ಅದು ಥಾರ್ ಜೀಪು ಎಂಬುದನ್ನು ದೃಢಪಡಿಸಿಕೊಂಡರು. ನಂತರ

ವಾಹನ ಪತ್ತೆಗೆ ಕಾರ್ಯೋನ್ಮುಖರಾದರು . ವಾಹನದ ನಂ. ಸಿಕ್ಕಮೇಲೆ ಪೊಲೀಸರು ಬಿಡುತ್ತಾರಾ … ,ಇಲ್ಲ , ಆದರೆ ಇಲ್ಲಿ ಸಂಪೂರ್ಣ ನಂ.ಸಿಕ್ಕಿರಲಿಲ್ಲ ,  ತಮಗೆ ದೊರೆತ ‘ಥಾರ್’ ಜೀಪಿನ ಸಂಖ್ಯೆಗಳನ್ನು ಕಂಪನಿಗೆ ಕರೆ ಮಾಡಿ ವಿವರ ಪಡೆದರು. ಅವುಗಳ ಆಧಾರದಲ್ಲಿ KA13Z6..4 ಥಾರ್ ಜೀಪನ್ನು ವಶಪಡಿಸಿಕೊಂಡಿದ್ದು. ಹಾಸನದ ವಿಶ್ವನಾಥ್ ಎಂಬುವವರು ಈ ಜೀಪಿನ ಮಾಲೀಕರು ಎಂದು ತಿಳಿದುಬಂದಿದೆ ., ಎಳ್ಳೇಶಪುರ ಸಮೀಪ ಅಪಘಾತ ಮಾಡಿ ಪರಾರಿಯಾಗಿದ್ದ ಜೀಪನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡರು. , ವಿಷಯ ತಿಳಿದ ನಗರದ ನಾಗರೀಕರು

ಸರ್ಕಲ್‍ಇನ್‍ಸ್ಪೆಕ್ಟರ್ ದೀಪಕ್, ನಗರಠಾಣೆ ಎಸ್.ಐ. ಅರುಣ್ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ

LEAVE A REPLY

Please enter your comment!
Please enter your name here