ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಪವಿತ್ರ ಕೆ.ಜೆ ಘೋಷಣೆ

0

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಆ ಬೆನ್ನಲ್ಲೇ ರಾಷ್ಟ್ರೀಯ ಪಕ್ಷಗಳ ಜೊತೆ ಪ್ರಾದೇಶಿಕ ಪಕ್ಷಗಳು ಕೂಡ ಕಸರತ್ತು ನಡೆಸುತ್ತಿವೆ ಕೆಲ ದಿನಗಳ ಹಿಂದಷ್ಟೇ ಜನಾರ್ದನ ರೆಡ್ಡಿ ಹೊಸ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಿದ್ದು ಜನಾರ್ದನ ರೆಡ್ಡಿ ದಂಡಯಾತ್ರೆ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ ಕೇವಲ ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾದ ಪ್ರಚಾರ ಇದೀಗ ಹಳೆ ಮೈಸೂರು ಭಾಗಕ್ಕೂ

ವಿಸ್ತರಿಸಿದಂತೆ ಕಾಣ್ತಿದೆ ನೆನ್ನೆಯಷ್ಟೇ ಜೆಡಿಎಸ್ ಭದ್ರಕೊಟೆಯಾಗಿರುವ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಯಾಗಿ ಜಂಬೂರು ಗ್ರಾಮದ ಪವಿತ್ರ ಜೆ.ಕೆ ಎಂಬುವವರನ್ನ ಘೋಷಣೆ ಮಾಡಿದ್ದು ವಿಧಾನಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕೆ ಆರ್ ಪಿಪಿ ಅಭ್ಯರ್ಥಿ ಪವಿತ್ರ ಕೆ.ಜೆ ಕೂಡ ತಮ್ಮ ಬೆಂಬಲಿಗರೊಂದಿಗೆ ಗಂಗಾವತಿಯಲ್ಲಿನ ಜನಾರ್ದನ ರೆಡ್ಡಿ ಕಛೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here