ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿದು ಬಿಲ್ ಕೊಡದೆ ರೌಡಿಸಂ ; ಬುಟ್ ಬಿಡ್ತಾರಾ ಪೊಲೀಸರು

0

ಹಾಸನ : ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿದು ಬಿಲ್ ಕೊಡದೆ, ನಾವು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿರುವ ರೌಡಿಗಳು, ನಮ್ಮ ಬಳಿಯೇ ಹಣ ಕೇಳುತ್ತೀಯಾ ಎಂದು ಬಾರ್‌ನ ಕ್ಯಾಷಿಯರ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು. , ಕುಡಿದ ಅಮಲಿನಲ್ಲಿ ಬಾರ್‌ನೊಳಗೆ ಕೂತು ಜನರಿಗೆ ಆವಾಜ್ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮೂವರ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಉರುಳಾಡಿಸಿ ಹೊಡೆಯಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮೂವರನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ತಯಾರಿ ಮಾಡಿತ್ತು. ಗಡಿಪಾರು ವಿಚಾರ ತಿಳಿದು ಕಿಡಿಗೇಡಿಗಳು

ಚನ್ನರಾಯಪಟ್ಟಣದಿಂದ ಹೊಳೆನರಸೀಪುರ ಗಡಿಭಾಗಕ್ಕೆ ಬಂದು ತಲೆ ಮರೆಸಿಕೊಳ್ಳುವ ಪ್ಲ್ಯಾನ್ ಮಾಡಿದ್ದರು. ಈ ನಡುವೆ ಕುಡಿದು ಗಲಾಟೆ ಮಾಡಿಕೊಂಡು ಧರ್ಮದೇಟು ತಿಂದಿದ್ದಾರೆ. ಕುಡಿದ ಅಮಲಿನಲ್ಲಿ ಜನರಿಗೆ ಕಾಟ ಕೊಡುತ್ತಿದ್ದ ಮೂವರು ರೌಡಿಶೀಟರ್‌ಗಳಿಗೆ ಹಿಗ್ಗಾಮುಗ್ಗ ಥಳಿಸಿರುವುದು  ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. , ಎರಡು ಕೊಲೆ ಪ್ರಕರಣ ಆರೋಪಿ ಯಾಚೇನಹಳ್ಳಿ ಚೇತು, ಉಲಿವಾಲ ಚೇತು ಮತ್ತು

ನೈನ್ಟಿ ವಿಶ್ವ ಎಂಬ ಮೂವರನ್ನು ಹಿಡಿದು ಜನರು ಥಳಿಸಿದ್ದಾರೆ. ಜಿಲ್ಲೆಯಲ್ಲಿ ನಟೋರಿಸ್ ರೌಡಿಗಳಾಗಿದ್ದ ಈ ಮೂವರು, ನಾಲ್ಕು ದಿನದ ಹಿಂದೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿಯಲ್ಲಿ ಗಲಾಟೆ ಮಾಡಿದ್ದಾರೆ., ಬಾರ್ ಕ್ಯಾಷಿಯರ್ ದೂರು ಆಧರಿಸಿ ಮೂವರು ರೌಡಿಗಳ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಾಗಿದೆ. ಹಳ್ಳಿ ಮೈಸೂರು ಪೊಲೀಸ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here