ಫೆ.19ರಂದು ಹಾಸನ ಜಿಲ್ಲಾಧಿಕಾರಿ , ಅಧಿಕಾರಿಗಳ ಗ್ರಾಮ ವಾಸ್ತವ್ಯ : ಡಿಸಿ ಆಯ್ಕೆ ಮಾಡಿದ ಗ್ರಾಮಗಳು ಇಂತಿವೆ

0

ಹಾಸನ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯ ಕ್ರಮದ ಅಂಗ ವಾಗಿ ಫೆ. 19 ರಂದು ಡಿಸಿ ಆರ್. ಗಿರೀಶ್ ಚನ್ನರಾಯ ಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ನಂತರ : ಕಟ್ಟಾಯ ಹೋಬಳಿಯ ಅಂಕನಹಳ್ಳಿ, ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಕಾಮಸಮುದ್ರ, ಹೊಳೆ ನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಬಿಟ್ಟಗೌಡನಹಳ್ಳಿ, ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಸರಗೂರು, ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ದೇವಾಲದಕೆರೆ, ಬೇಲೂರು ತಾಲೂಕಿನ ಹಳೇಬಿಡು ಹೋಬಳಿಯ ಸಾಣೇನಹಳ್ಳಿ, ಆಲೂರು ತಾಲೂಕಿನ ದೊಡ್ಡಕಣಗಾಲು ಗ್ರಾಮಗಳಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ , ಈ ಮೇಲ್ಕಂಡ ಗ್ರಾಮಸ್ಥರು ತಮ್ಮ ಅಹವಾಲು ಗಳಿದ್ದರೆ ಸಿದ್ದಮಾಡಿಕೊಂಡು ಮನವಿ ಮಾಡಬಹುದು .

LEAVE A REPLY

Please enter your comment!
Please enter your name here