ಅಕಾಲಿಕ ಮಳೆ ಅರಸೀಕೆರೆ ಮಳೆ ಇಲ್ಲದ ಬಹುತೇಕ ಭಾಗದಲ್ಲಿ ಹರ್ಷ

0

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಮುದುಡಿ ಮತ್ತು ಬೋರೆಹಳ್ಳಿಗಳ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು ಗ್ರಾಮದೇವತೆಗಳ ಪೂಜಾ ಕಾರ್ಯದೊಂದಿಗೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ , ತಾ.ಪಂ.ಮಾಜಿ ಸದಸ್ಯ ಮುಖಂಡ ಹೊಸೂರು ಗಂಗಾಧರ, ಗ್ರಾ.ಪಂ. ಅಧ್ಯಕ್ಷೆ ವಿನೋದ ಲೋಕೇಶ್, ಗ್ರಾ.ಪಂ.ಸದಸ್ಯರು, Apmc ಸದಸ್ಯ ಶಿವಪ್ಪ, ಪ್ರಾ.ಕೃ.ಪತ್ತಿನ ಅಧ್ಯಕ್ಷ ಕುಮಾರ್, ಮುಖಂಡರಾದ ಕೃಷ್ಣಪ್ಪ, ಮಂಜು, ಕುಮಾರ್, ಹಾಗೂ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಳೆದ ತಿಂಗಳಿಂದ ಸತತವಾಗಿ ಉತ್ತಮ ಮಳೆಯಾಗುತ್ತಿದ್ದು, ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬುತ್ತಿರುವಿದು ಸಂತೋಷದ ವಿಚಾರ. ಕೆರೆಗಳು ತುಂಬಿ ಅಂತರ್ಜಲ ಹೆಚ್ಛಾಗಿಲಿದ್ದು ರೈತರುಗಳಿಗೆ ಅನುಕೂಲವಾಗಲಿದೆ . ಆದರೆ ಈ ಸತತ ಮಳೆಯಿಂದ ಪ್ರಸ್ತುತ ರಾಗಿ ,ಜೋಳ ಬೆಳೆ ನಾಶವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹೆಚ್ಚಿನ ಪ್ರಮಾಣದ ಪರಿಹಾರ ನೀಡಬೇಕು ಎಂದರು.

LEAVE A REPLY

Please enter your comment!
Please enter your name here