ಕನಕ ದಾಸ ಜಯಂತಿ 2021 ಹಾಸನ

0

ಮಹನೀಯರ ಜೀವನದ ಆದರ್ಶ ಅನುಕರಣೀಯ:ಅಪರ ಜಿಲ್ಲಾಧಿಕಾರಿ

ಹಾಸನ ನ.22: ಕನಕದಾಸರ ಹಾಗೂ ಒನಕೆ ಓಬವ್ವ ಅವರ ಜೀವನದ ಆದರ್ಶಗಳು ಎಲ್ಲರಿಗೂ ಅನುಕರಣೀ ಯ ಎಂದು ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಅವರು ಮಹನೀ ಯರ ಜೀವನ ಶೈಲಿ, ಅವರ ಧೈರ್ಯ, ನಂಬಿಕೆ, ಸ್ಫೂರ್ತಿ ಇವುಗಳಲ್ಲಿ ಒಂದು ಅಂಶವನ್ನಾದರೂ ಜೀವನದಲ್ಲಿ ಅಳವಡಿಸಿ ಕೊಂಡು ಸಾರ್ಥಕತೆ ಯತ್ತ ಸಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ. ಎಚ್. ಎಂ. ನಾಗರಾಜ್ ಕಲಕಟ್ಟೆ ಅವರು ಮಾತನಾಡಿ ಕುಲ ಕುಲವೆಂದು ಬಡಿದಾಡದಿರಿ.. ಎಂದು ಕನಕದಾಸರು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ಸಂವಿಧಾನ ದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ ನಮ್ಮ ಮನಸ್ಥಿತಿ ಗಳು ಬದಲಾವಣೆ ಯಾಗಬೇಕು, ಕನಕದಾಸರು ದೇವರು ಭಕ್ತಿಗೆ ಮಾತ್ರ ಒಲಿಯುತ್ತಾನೆ ಹೊರತು ಜಾತಿಗಲ್ಲ ಎಂಬುದನ್ನು ತೋರಿಸಿದ್ದಾರೆ. ಅದೇ ರೀತಿ ಓಬವ್ವ ಸ್ತ್ರೀ ಶಕ್ತಿ ಹಾಗೂ ಧೈರ್ಯಕ್ಕೆ ಪ್ರತಿರೂಪವಾಗಿದ್ದಾರೆ ಅವರ ಆದರ್ಶಗಳು ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು.

ಕನಕದಾಸರು 16 ನೇ ಶತಮಾನದಲ್ಲಿ ಸಾಮಾ ಜಿಕ ಕ್ರಾಂತಿಯ ಹಾದಿ ತೋರಿದವರು. ಹುಟ್ಟಿನ ಲ್ಲಿ ಕೆಳ ವರ್ಗದಲ್ಲಿದ್ದರೂ, ನಂತರ ಜ್ಞಾನ ಸಂಪಾದಿ ಸಿ ಮನ ಪರಿವರ್ತನೆ ಗೊಂಡು ಭಕ್ತಿ ಮಾರ್ಗದ ಲ್ಲಿ ಸಾಗಿ ಸಮಾಜ ಸುಧಾರಣೆಗೆ ಪ್ರೇರಣೆ ಯಾದರು ಕನಕದಾಸರು ಎಲ್ಲಾ ಜನ ಸಮುದಾಯ ಗಳಿಗೂ ಸೇರಿದ ಮಹಾ ನ್ ಪುರುಷರಾಗಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಈ. ಕೃಷ್ಣೇಗೌಡ, ಅವರು ಮಾತನಾಡಿ ಸಮಾಜದ ಲ್ಲಿನ ಮೇಲು ಕೀಳು ವ್ಯವಸ್ಥೆ ವಿರುದ್ದ ಶತ ಮಾನಗಳ ಹಿಂದೆಯೇ ಕನಕದಾಸರು ಧ್ವನಿ ಎತ್ತಿದವರು ಬಸವಣ್ಣ ನವರ ತತ್ವ ಸಿದ್ದಾಂತ ಗಳಂತೆ ಕನಕದಾಸರೂ ಸಹ ಸಾಮಾಜಿಕ ಅಸಮಾನತೆಗಳ ವಿರುದ್ದ ಅರಿವು ಮೂಡಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷ ತ್ತಿನ ನೂತನ ಜಿಲ್ಲಾ ಅಧ್ಯಕ್ಷರಾದ ಮಲ್ಲೇಶ್ ಗೌಡ ಅವರು ಮಾತನಾಡಿ ಎಲ್ಲಾ ಮಹಾನಾಯಕರ ನ್ನು ಕೇವಲ ಒಂದೊಂದು ಜಾತಿಗೆ ಸೀಮಿತಗೊಳಿ ಸದೆ ಎಲ್ಲಾ ಸಮುದಾ ಯಗಳೂ ಅವರ ಮೌಲ್ಯಗಳನ್ನು ಅರಿತು ಪಾಲನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸುದರ್ಶನ್ ಅವರು ಕನಕದಾಸರ ಜೀವನ, ಸಾಹಿತ್ಯ ಶ್ರೇಷ್ಠತೆ ,ಆದರ್ಶ, ಭಕ್ತಿ ಮಾರ್ಗ ದಲ್ಲಿ ಕಂಡ ಸತ್ಯಗಳು, ಸಾಮಾಜಿಕ ಪರಿವರ್ತನೆಗೆ ಮಾಡಿದ ಪ್ರಯತ್ನಗಳು ಮತ್ತು ಅವರ ಕೊಡುಗೆಗಳ ಬಗ್ಗೆ ವಿವರಿಸಿದರಲ್ಲದೆ, ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ವಿರುದ್ದ ಧ್ವನಿ ಎತ್ತಿ ಸಮಾಜ ಸುಧಾರಣೆಗೆ ಕನಕದಾಸರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಾಗರಾಜ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಪಟೇಲ್ ಶಿವಪ್ಪ, ತಾಲ್ಲೂಕು ಸಂಘದ ಅಧ್ಯಕ್ಷರಾದ ಸಿದ್ದೇಗೌಡ, ಸ್ವಾತಂತ್ರ್ಯ ಹೋರಾಟಗಾರಾದ ಹೆಚ್.ಎಂ ಶಿವಣ್ಣ, ಸಮಾಜ ಸೇವಕರಾದ ಮಹಂತಪ್ಪ ಮತ್ತಿತರು ಹಾಜರಿದ್ದರು.


LEAVE A REPLY

Please enter your comment!
Please enter your name here