ಹೊಳೆಯುವ ಚರ್ಮ ಬೇಕೇ? ಚರ್ಮದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಉದ್ದ ಹಾಗೂ ದಟ್ಟವಾದ ಕೂದಲಿಗೆ ಪರಿಹಾರ ಹುಡುಕುತ್ತಿದ್ದೀರಾ?ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಉತ್ತರ “ನಿಂಬೆ ಹಣ್ಣು”. ಅಡುಗೆ ಮನೆಯಲ್ಲಿ ಉಪಯೋಗಿಸುವ ನಿಂಬೆ ಹಣ್ಣಿನ ಚರ್ಮಕ್ಕೆ ಹಾಗೂ ಕೂದಲಿಗೆ ಹೇಗೆ ಉಪಯೋಗವಾಗುತ್ತದೆ?ಇದರಲ್ಲಿ ಅಡಗಿರುವ ವಿಟಮಿನ್ ಸಿ ಹಾಗೂ ಸಿಟ್ರಸ್ ಆಮ್ಲ ನಿಮ್ಮ ಚರ್ಮ ಹಾಗೂ ಕೂದಲ ಮೇಲೆ ಭಾರಿ ಪ್ರಭಾವ ಬೀರುತ್ತದೆ.
ಪ್ರಯೋಜನಗಳು :
*ಕಾಂತಿಯುಕ್ತವಾದ ತ್ವಚೆ :
ಎಣ್ಣೆ ತ್ವಚೆಯನ್ನು ಹೋಗಲಾಡಿಸಲು ನಿಂಬೆ ಹಣ್ಣು ರಾಮಬಾಣವಾಗಿ ಕೆಲಸ ಮಾಡುತ್ತದೆ. ಹೆಂಗಸರು ಮೇಕಪ್ ಮಾಡಿಕೊಳ್ಳುವ ಮೊದಲು ‘ನಿಂಬೇರಸ’ ಹಚ್ಚಿಕೊಂಡು ಐದು ನಿಮಿಷ ಬಿಟ್ಟು ಮುಖ ತೊಳೆದರೆ ನಿಮ್ಮ ಮೇಕಪ್ ತುಂಬಾ ಹೊತ್ತಿನವರೆಗೆ ಇರುತ್ತದೆ .
ಮುಖದಿಂದ ಸತ್ತ ಜೀವಕೋಶಗಳನ್ನು ತೆರವುಗೊಳಿಸಿ ಒಳ್ಳೆಯ ತ್ವಚೆಯನ್ನು ನಿಮಗೆ ನೀಡುತ್ತದೆ .
*ಆಕರ್ಷಕವಾದ ಉಗುರುಗಳು:
ನಿಮ್ಮ ಉಗುರುಗಳು ಬಹಳ ಸೂಕ್ಷ್ಮವಾಗಿದ್ದರೆ ಚಿಂತಿಸಬೇಡಿ. ನಿಂಬೆ ಹಣ್ಣಿನ ರಸದಲ್ಲಿ ನಿಮ್ಮ ಉಗುರುಗಳನ್ನು ೨೦ ನಿಮಿಷ ನೆನೆಸಿದರೆ ಉಗುರಿನಲ್ಲಿ ಅಡಗಿರುವ ಹಳದಿ ಅಂಶವನ್ನು ತೆಗೆದು ನಿಮ್ಮ ಉಗುರುಗಳನ್ನು ಆಕರ್ಷಕವಾಗಿ! ಮಾಡುತ್ತದೆ .
*ಉದ್ದ ಹಾಗೂ ದಟ್ಟ ಕೂದಲು :
ದಟ್ಟ ಕೂದಲ ಬೆಳವಣಿಗೆ ಅಷ್ಟು ಸುಲಭವಲ್ಲ ಆದರೆ ನಿಂಬೆರಸ ಬಹಳ ವೇಗವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ .ಇದನ್ನು ವಾರಕ್ಕೆ ೨-೩ ಬಾರಿ ಉಪಯೋಗಿಸಿದರೆ, ಉದ್ದವಾದ ದಟ್ಟವಾದ ಕೂದಲು ನಿಮ್ಮದಾಗುತ್ತದೆ. ಹೀಗಾಗಿ ನಿಂಬೆ ಹಣ್ಣನ್ನು ಉಪಯೋಗಿಸಿ ಇದರಿಂದ ಆಗುವ ಉತ್ತಮ ಫಲಿತಾಂಶಗಳನ್ನು ಪಡೆಯಿರಿ.