ಬೇಲೂರು ದೇವಾಲಯದ ಮಹಾದ್ವಾರ ಗೋಪುರಕ್ಕೆ ಸಿಡಿಲು ಬಡಿದು ಲಘುವಾಗಿ ಹಾನಿಯಾಗಿದೆ

0

ಬೇಲೂರು: ಸಿಡಿಲು ಬಡಿದು ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಕಳಸ ಗೋಪುರದ ತುದಿ ಕಿತ್ತು ಹೋಗಿರುವ ಘಟನೆ ಗುರುವಾರ ನಡೆದಿದೆ.
ಗುರುವಾರ ಮಧ್ಯಾಹ್ನ 3-30 ರ ಸಮಯದಲ್ಲಿ ಸುರಿದ ಭಾರೀ ಮಳೆಯೊಂದಿಗೆ ಸಿಡಿಲು ಬಡಿದು ಶ್ರೀ ಚನ್ನಕೇಶವ ದೇವಾಲಯದ ಮೇಲ್ಬಾಗದ ಕಳಸದ ಪಕ್ಕ ಎರಡು ಕೊಂಬುಗಳಲ್ಲಿ ಒಂದು ಭಾಗ ಬಿರುಕು ಬಿಟ್ಟಿದೆ.
ಸ್ಥಳಕ್ಕೆ ತಹಸೀಲ್ದಾರ್ ಎಂ. ಮಮತಾ ಭೇಟಿ ನೀಡಿ ಪರಿಶೀಲಿಸಿ ನಂತರ ಮಾತನಾಡಿದ ಅವರು,

ವಿಶ್ವ ಪ್ರಸಿದ್ದ ಚನ್ನಕೇಶವ ಗೋಪುರಕ್ಕೆ ಸಿಡಿಲಿನಿಂದ ಕಳಶದ ಗೋಪುರಕ್ಕೆ ಸ್ವಲ್ಪ ಹಾನಿಯಾಗಿದ್ದು ಈ ಕುರಿತು ಪ್ರಾಚ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹಪ್ರಿಯಭಟ್ ಮಾತನಾಡಿ, ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ದೇವಾಲಯಕ್ಕೆ ಹಾಗೂ

ಗೋಪುರಗಳಿಗೆ ಸಿಡಿಲು ಹಾಗೂ ಪ್ರಕೃತಿ ವಿಕೋಪಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಿದ್ದಾರೆ. ಕಳಸದ ಪಕ್ಕ ಕಿವಿಯಂತಿರುವ ಎರಡು ಓರು ಕಂಬಗಳಿಗೆ ಸಿಡಿಲಿನಿಂದ ಹಾನಿಯಾಗಿದೆ. ಆದರಿಂದ ಭಕ್ತಾಧಿಗಳು ಗಾಬರಿಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಮೇಲಾಧಿಕಾರಿಗಳು ಹಾಗೂ ಆಗಮಿಕರ ಬಳಿ ಚರ್ಚಿಸಿ ಅವರ ಸಲಹೆ ಪಡೆದು ಶಾಸ್ತೊಸ್ತ

ಅಂತರಂಗ ಶುದ್ದಿ ಹಾಗೂ ಅಂಗೋದಕ ಶುದ್ದಿ ಮಾಡಲಾಗುವುದು ಎಂದರು.
ಮುಜರಾಯಿ ಇಲಾಖೆಯ ಸಿ.ಒ. ಗೌತಮ್ ಮಾತನಾಡಿ, ಈ ಹಿಂದೆ ಹಲವಾರು ಬಾರಿ ಮಳೆ ಹಾಗೂ ಗಾಳಿಗೆ ಈ ರೀತಿ ಸಿಡಿಲು ಬಡಿದ ಸಂದರ್ಭದಲ್ಲಿ ಹಾನಿಯಾಗದಂತೆ ಸಿಡಿಲು ನಿರೋಧಕ ಪಟ್ಟಿಯನ್ನು ಹಾಕಲಾಗಿದ್ದು ಕೆಲ ದಿನಗಳ ಹಿಂದೆ ದೇಗುಲದ ಗೋಪುರಕ್ಕೆ ಬಣ್ಣ ಬಳಿಯಲಾಗಿತ್ತು. ಈ ಸಂದರ್ಭದಲ್ಲಿ

ಅಲ್ಲಿ ಯಾವುದಾದರೂ ವೈರ್ ತುಂಡಾಗಿದ್ದಲ್ಲಿ ತಕ್ಷಣವೇ ಅದರ ಬಗ್ಗೆ ಗಮನ ಹರಿಸಿ ಸರಿಪಡಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here