ಈರುಳ್ಳಿಯಲ್ಲಿ ಹೆಚ್ಚು ಆರೋಗ್ಯಕರ ಗುಣಗಳು ಅಡಗಿವೆ. ಇದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಬಹುದು.ಹಾಗೂ ಈ ತರಕಾರಿ ಪ್ರತಿದಿನದ ಅಡುಗೆಗೆ ಕಡ್ಡಾಯವಾಗಿ ಬೇಕಾದದ್ದು .ಇದು ನಿಮ್ಮ ಆಹಾರಕ್ಕೆ ಹೇಗೆ ರುಚಿಯನ್ನು ಹೆಚ್ಚಿಸುತ್ತದೊ, ಹಾಗೆ ನಿಮ್ಮ ಆರೋಗ್ಯ ಭಾಗ್ಯವನ್ನು ಹೆಚ್ಚಿಸುತ್ತದೆ.
ಇದರಲ್ಲಿ ವಿಟಮಿನ್ ಸಿ, ಫೈಬರ್, ಪೋಲಿಕ್ ಆ್ಯಸಿಡ್, ಕ್ಯಾಲ್ಸಿಯಂ, ಐರನ್, ಸಲ್ಫರ್, ಪ್ರೊಟೀನ್ ,ಅಮೈನೋ ಆ್ಯಸಿಡ್ ಹೆಚ್ಚು ಪ್ರಮಾಣದಲ್ಲಿರುತ್ತದೆ.ಅದಕ್ಕಾಗಿ ಇದರ ಪ್ರಯೋಜನಗಳು ಬಹಳಷ್ಟು.
ಪ್ರಯೋಜನಗಳು:
• ಕ್ಯಾನ್ಸರ್ ರೋಗಿಗಳಿಗೆ ಇದು ಬಹಳ ಸಹಾಯಕಾರಿ :
ಈರುಳ್ಳಿಯಲ್ಲಿ ಅಡಗಿರುವ ಆರ್ಗನೊ ಸಲ್ಫರ್ ಅಂಶ ನಿಮ್ಮ ದೇಹದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.ಇದು ನಿಮ್ಮ ದೇಹದಲ್ಲಿರುವ ಕ್ಯಾನ್ಸರ್ ಸೆಲ್ಸ್ ಜೊತೆಗೆ ಹೋರಾಡಿ ಕ್ಯಾನ್ಸರ್ ರೋಗವನ್ನು ದೂರ ಮಾಡುತ್ತದೆ.
• ಅಲರ್ಜಿ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ :
ನಿಮ್ಮ ದೇಹದಲ್ಲಿ ಅಲರ್ಜಿ ಸಮಸ್ಯೆ ಉಂಟಾಗುವುದು ‘ಹಿಸ್ಟಮಿನ್’ ಎಂಬ ಹಾರ್ಮೋನ್ ಬಿಡುಗಡೆಯಾಗುವುದರಿಂದ.ಈ ಸಮಸ್ಯೆಗೆ ಮಾತ್ರೆ ಸೇವಿಸುವ ಬದಲು ದಿನಕ್ಕೊಮ್ಮೆ ಒಂದು ಹಸಿ ಈರುಳ್ಳಿ ತಿನ್ನುವ ಅಭ್ಯಾಸದಿಂದ ಅಲರ್ಜಿಗಳಿಂದ ನೀವು ಮುಕ್ತಿ ಪಡೆಯಬಹುದು.
• ಕೂದಲು ಉದುರುವ ಸಮಸ್ಯೆಯನ್ನು ತಡೆಯುತ್ತದೆ:
ಭಾರತಕ್ಕೆ ಎರಡು ಬಾರಿ ಈರುಳ್ಳಿ ರಸವನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡರೆ ನಿಮ್ಮ ಕೂದಲ ಬುಡಗಳನ್ನು ಗಟ್ಟಿ ಮಾಡಿ ಕೂದಲು ಉದುರುವ ಸಮಸ್ಯೆಯನ್ನು ನಿಲ್ಲಿಸುತ್ತದೆ ಹಾಗೂ ನಿಮ್ಮ ಕೂದಲನ್ನು ಮೃದುವಾಗಿ ಮಾಡುತ್ತದೆ.
• ಕೆಮ್ಮು ಮತ್ತು ಶೀತಕ್ಕೆ ಇದು ಮನೆಮದ್ದು:
ಈರುಳ್ಳಿ ರಸ ಮತ್ತು ಜೇನು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ನಿಮ್ಮ ಶೀತಕ್ಕೆ ಹಾಗೂ ಕೆಮ್ಮಿಗೆ ಮುಕ್ತಿ ದೊರಕುತ್ತದೆ .
ಆದ್ದರಿಂದ ದಿನಕ್ಕೊಮ್ಮೆ ಹಸಿ ಈರುಳ್ಳಿ ತಿಂದು ಅದರ ಉಪಯೋಗಗಳನ್ನು ಪಡೆದುಕೊಳ್ಳಿ.
-ತನ್ವಿ .ಬಿ