ಶೇಕಡ 35 ರಷ್ಟು ಅಂಕಗಳಿಸಿದ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೋಮ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಶ್ರೀಮತಿ ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್, ಹಾಸನ ಇಲ್ಲಿ ಅ.15 ರೊಳಗೆ ಅರ್ಜಿ ಸಲ್ಲಿಸಿ

0

ಡಿಪ್ಲೊಮ ಕೋರ್ಸ್‍ಗಳಿಗೆ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನ!!
ಹಾಸನ,ಅ.14(ಹಾಸನ್_ನ್ಯೂಸ್): ಹಾಸನ ನಗರದಲ್ಲಿರುವ ಶ್ರೀಮತಿ ಎಲ್.ವಿ. (ಸರ್ಕಾರಿ) ಪಾಲಿಟೆಕ್ನಿಕ್, ಇಲ್ಲಿ 2020 – 21 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮ ಕೋರ್ಸ್‍ಗಳಲ್ಲಿ ಭರ್ತಿ ಆಗದೇ ಇರುವ ಉಳಿಕೆ ಸೀಟುಗಳಿಗೆ ಆಫ್ ಲೈನ್ ಮೂಲಕ ಎಸ್.ಎಸ್. ಎಲ್.ಸಿ ತತ್ಸಮಾನ ಪರೀಕ್ಷೆಯಲ್ಲಿ ಶೇಕಡ 35 ರಷ್ಟು ಅಂಕಗಳಿಸಿದ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಿಪ್ಲೋಮ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಶ್ರೀಮತಿ ಎಲ್.ವಿ.(ಸರ್ಕಾರಿ) ಪಾಲಿಟೆಕ್ನಿಕ್, ಹಾಸನ ಇಲ್ಲಿ ಅ.15 ರೊಳಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಶೇಕಡ 40 ರಷ್ಟು ಮತ್ತು ಅದಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಶೇಷ ಚೇತನ ಅಭ್ಯರ್ಥಿಗಳಿಗೆ 25 ಸೀಟುಗಳು ನೇರ ಪ್ರವೇಶ ಇರುತ್ತದೆ ಮತ್ತು ಅವರಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರನ್ನು ಕಚೇರಿ ವೇಳೆ ಬೇಟಿ ಮಾಡಬಹುದು ಎಂದು ಪ್ರಾಂಶುಪಾಲರಾದ ವಸಂತ ಕುಮಾರ್ ಡಿ.ಹೆಚ್. ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here